Mega Exclusive:ಅಬ್ಬಬ್ಬಾ... ಇವರು ಸತ್ತವರನ್ನೂ ಬದುಕಿಸ್ತಾರೆ, ಏನೀ ಸಂಜೀವಿನಿ ಕಡ್ಡಿ ಚಮತ್ಕಾರ.!?
ಸತ್ತವರನ್ನು ಬದುಕಿಸುವುದನ್ನು ಎಲ್ಲಾದರೂ ನೋಡಿದ್ದೀರಾ..? ಇಂತದ್ದೊಂದು ಪವಾಡ ನಡೆದಿದ್ಯಾ..? ಹೌದು. ಇಂತದ್ದೊಂದು ಪವಾಡ ನಡೆದಿದೆ.
ಬೆಂಗಳೂರು (ನ. 27): ಸತ್ತವರನ್ನು ಬದುಕಿಸುವುದನ್ನು ಎಲ್ಲಾದರೂ ನೋಡಿದ್ದೀರಾ..? ಇಂತದ್ದೊಂದು ಪವಾಡ (Miracle)ನಡೆದಿದ್ಯಾ..? ಹೌದು. ಇಂತದ್ದೊಂದು ಪವಾಡ ನಡೆದಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ ಸಂಜೀವಿನಿ ಕಡ್ಡಿ ಇರುವ ಗ್ಯಾಂಗ್ ಬಳಿ ರಹಸ್ಯ ಕಾರ್ಯಾಚರಣೆಗಿಳಿಯಿತು. ಬೆಳಗಾವಿಯಿಂದ (Belagavi) 50 ಕಿಮೀ ದೂರವಿರುವ ಊರಿಗೆ ಈ ಅಪರಿಚಿತ ತಂಡವನ್ನು ಬೆನ್ನತ್ತಿ ಹೋಯಿತು. ಅಲ್ಲೊಂದು ದೊಡ್ಡ ಕಟ್ಟಡ. ಕಟ್ಟಡದೊಳಗೆ ಅಪರಿಚಿತರ ಗ್ಯಾಂಗ್. ಅವರ ಬಳಿ ಹೋದಾಗ ಮೀನನ್ನು ತರಲು ಹೇಳುತ್ತಾರೆ. ಅದರಂತೆ ಮೀನು ತೆಗೆದುಕೊಂಡು ಅವರ ಬಳಿ ಹೋಗಲಾಗುತ್ತದೆ. ಅವರ ಸಂಜೀವಿನಿ ಕಡ್ಡಿಯಿಂದ ಸತ್ತಿರುವ ಮೀನಿಗೆ ಜೀವ ಬರುತ್ತದೆ. ಅರೇ, ಇದ್ಹೇಗೆ ಸಾಧ್ಯ ರೀ..? ಅಂತೀರಾ..? ಈ ಕಾರ್ಯಾಚರಣೆ ನೋಡಿ.