BIG 3 Heroes: ಶ್ವಾನ ಪ್ರೇಮಿ ಬ್ಯೂಟಿಶಿಯನ್, ಶಿಕ್ಷಣ ಪ್ರೇಮಿ ಪೊಲೀಸ್, ಶಾಲಾ ಪ್ರೇಮಿ ಅನು ಅಕ್ಕ
ನಮ್ಮ ನಡುವೆ ಸಾಕಷ್ಟು ಸಾಧಕರಿದ್ದಾರೆ, ಸಮಾಜ ಸೇವಕರಿದ್ದಾರೆ. ಸದ್ದು ಗದ್ದಲವಿಲ್ಲದೇ ತಮ್ಮ ಪಾಡಿಗೆ ತಾವು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತವರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಬಿಗ್3 ಹೀರೋ.
ಬೆಂಗಳೂರು (ಜೂ. 11): ನಮ್ಮ ನಡುವೆ ಸಾಕಷ್ಟು ಸಾಧಕರಿದ್ದಾರೆ, ಸಮಾಜ ಸೇವಕರಿದ್ದಾರೆ. ಸದ್ದು ಗದ್ದಲವಿಲ್ಲದೇ ತಮ್ಮ ಪಾಡಿಗೆ ತಾವು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತವರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಬಿಗ್3 ಹೀರೋ.
ಬಳ್ಳಾರಿಯ ಮಮತಾ ವೃತ್ತಿಯಲ್ಲಿ ಬ್ಯುಟಿಶಿಯನ್, ಪ್ರತಿನಿತ್ಯ 10 ಕೆಜಿ ಅನ್ನ ತಯಾರಿಸಿ ಶ್ವಾನಗಳಿಗೆ ಅನ್ನ ಹಾಕುತ್ತಾರೆ. ಸಂಜೆಯ ನಂತರ ಬೀದಿ ಬೀದಿ ತಿರುಗಿ ಶ್ವಾನಗಳಿಗೆ ಆಹಾರ ಹಾಕುತ್ತಾರೆ. ಅವರ ಪಾಲಿನ ಅನ್ನಪೂರ್ಣೇಶ್ವರಿಯಾಗಿದ್ದಾರೆ. ಕೆಲವೊಮ್ಮೆ ಅನಾರೋಗ್ಯಕ್ಕೆ ತುತ್ತಾದ ಶ್ವಾನಗಳಿಗೆ ತಾವೇ ಖುದ್ದಾಗಿ ಔಷಧಿ ಹಚ್ಚುತ್ತಾರೆ. ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
BIG 3 Heroes: ಮಂಗಳಮುಖಿ ವೈಷ್ಣವಿಯ ಮಾನವೀಯತೆಯ ಕೆಲಸಕ್ಕೆ ಸಲಾಂ!
ಧಾರವಾಡದಲ್ಲಿ ಶಿವಾನಂದ್ ಸೈಬರ್ ಕ್ಕೈಮ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಊರು ಸವದತ್ತಿ ತಾ ಶರಸಂಗಿ ಗ್ರಾಮದಲ್ಲಿ ಹಗಲು ಗ್ರಂಥಾಲಯ ನಿರ್ಮಿಸಿ ಸಾವಿರಾರು ಮಂದಿಗೆ ಉಪಕಾರಿಯಾಗಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅನು ಅಕ್ಕ ನೂರಾರು ಸರ್ಕಾರಿ ಶಾಲೆಗಳಿಗೆ ಹೊಸ ಕಾಯಕಲ್ಪ ನೀಡಿದ್ದಾರೆ. ಇವರ ಸಾಮಾಜಿಕ ಕೆಲಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.