Big 3 Hero: ಬಳ್ಳಾರಿಯ ರಜಿನಿ ಲಕ್ಕ ಹಾಗೂ ಗದಗದ ಸಾಯಿ ದಾಸೋಹ ಕೇಂದ್ರ

ನಮ್ಮ ನಡುವೆ ಇರುವ, ತೆರೆ ಮರೆಯಲ್ಲಿ ಸಾಧನೆ ಮಾಡುತ್ತಿರುವ ಹೀರೋಗಳನ್ನು ಬಿಗ್ 3 ಪರಿಚಯಿಸುತ್ತಿದೆ. ಇಂದಿನ ನಮ್ಮ ಹೀರೋ ಬಳ್ಳಾರಿಯ ರಜನಿ ಲಕ್ಕ, ಗದಗದ ಶ್ರೀ ಸಾಯಿ ದಾಸೋಹ ಕೇಂದ್ರ

First Published Jul 23, 2022, 12:09 PM IST | Last Updated Jul 23, 2022, 12:13 PM IST

ಬೆಂಗಳೂರು (ಜು. 23): ನಮ್ಮ ನಡುವೆ ಇರುವ, ತೆರೆ ಮರೆಯಲ್ಲಿ ಸಾಧನೆ ಮಾಡುತ್ತಿರುವ ಹೀರೋಗಳನ್ನು ಬಿಗ್ 3 ಪರಿಚಯಿಸುತ್ತಿದೆ. ಇಂದಿನ ನಮ್ಮ ಹೀರೋ ಬಳ್ಳಾರಿಯ ರಜನಿ ಲಕ್ಕ, ಗದಗದ ಶ್ರೀ ಸಾಯಿ ದಾಸೋಹ ಕೇಂದ್ರ. 

BIG 3 Hero: ಸರ್ಕಾರಿ ಕೆಲಸಕ್ಕೆ ರಾಜೀನಾಮೆ, ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಡಾ ಜಯಮ್ಮ

ಬಳ್ಳಾರಿಯ ರಜನಿ ಲಕ್ಕ ವಿಶೇಷ ಚೇತನರ ಪಾಲಿನ ದೇವರು. ರಜನಿ ಮೂಲತಃ ಆಂಧ್ರದವರು. ಮದುವೆಯಾಗಿ ಬಳ್ಳಾರಿಗೆ ಬರುತ್ತಾರೆ. ಸಂಸಾರ, ಗಂಡ, ಮಕ್ಕಳು ಅಂತ ಕಳೆದು ಹೋಗಿದ್ದ ಇವರು ತಮ್ಮ 45 ನೇ ವಯಸ್ಸಿಯಲ್ಲಿ ಈಜು ಕಲಿಯುತ್ತಾರೆ. ಈಜನ್ನೇ ಬದುಕನ್ನಾಗಿಸಿಕೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ಧಾರೆ. ಅಸಹಾಯಕರನ್ನು ಬೆಳೆಸಬೇಕು ಎಂಬ ಉದ್ದೇಶದಿಂದ 2016 ರಿಂದ ವಿಶೇಷ ಚೇತನ ಮಕ್ಕಳಿಗೆ ಈಜು ಕಲಿಸಲು ಶುರು ಮಾಡುತ್ತಾರೆ. 

BIG 3 Heroes: ಇಲೆಕ್ಟ್ರಿಕ್ ಕಾರು ತಯಾರಿಸಿದ ಪಿಯು ಫೇಲ್ ವಿದ್ಯಾರ್ಥಿ ಜೀವನ್!

ಗದಗದ ಶ್ರೀ ಸಾಯಿ ದಾಸೋಹ ಕೇಂದ್ರ, ಹಸಿದವರ ಪಾಲಿನ ಅನ್ನದಾತರು. ಇಲ್ಲಿ ಕೇವಲ 10 ರೂಗೆ ಫುಲ್ ಮೀಲ್ಸ್ ಊಟ ಸಿಗುತ್ತದೆ. 3 ಜನರ ಪ್ರತ್ಯೇಕ ತಂಡ ಊಟ ತಯಾರಿಸುತ್ತಾರೆ. ಪ್ರತಿದಿನ 12 - 3 ಗಂಟೆಯವರೆಗೆ ಊಟ ಸಿಗುತ್ತದೆ.