Asianet Suvarna News Asianet Suvarna News

Covid 19: ಸಿಎಂಗೆ ನಿವಾಸದಲ್ಲಿ ಕೋವಿಡ್ ಟೆಸ್ಟ್, ಆರೋಗ್ಯದಲ್ಲಿ ಸುಧಾರಣೆ

ಸಿಎಂ ಬೊಮ್ಮಾಯಿಗೆ (CM Bommai) ಕೊರೊನಾ ಆಗಿ ಇಂದಿಗೆ 7 ದಿನ, ಹೀಗಾಗಿ ಸಿಎಂ ನಿವಾಸದಲ್ಲಿ ಕೋವಿಡ್ ಟೆಸ್ಟ್ (Covid Test) ಮಾಡಲಾಗಿದೆ. ಮನೆಯಿಂದಲೇ ಸಿಎಂ ಕಾರ್ಯನಿರ್ವಹಿಸುತ್ತಿದ್ದಾರೆ. 

ಬೆಂಗಳೂರು (ಜ. 16): ಸಿಎಂ ಬೊಮ್ಮಾಯಿಗೆ (CM Bommai) ಕೊರೊನಾ ಆಗಿ ಇಂದಿಗೆ 7 ದಿನ, ಹೀಗಾಗಿ ಸಿಎಂ ನಿವಾಸದಲ್ಲಿ ಕೋವಿಡ್ ಟೆಸ್ಟ್ (Covid Test) ಮಾಡಲಾಗಿದೆ. ಮನೆಯಿಂದಲೇ ಸಿಎಂ ಕಾರ್ಯನಿರ್ವಹಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದು, ತಮ್ಮ ಬೆಂಗಳೂರಿನ ಆರ್‌.ಟಿ. ನಗರ ನಿವಾಸದಲ್ಲಿ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಲಸಿಕೆಯ ಎರಡೂ ಡೋಸ್‌ ಪಡೆದಿರುವ ಬೊಮ್ಮಾಯಿ ಅವರು ಕೊರೋನಾ ಸೋಂಕಿತರಾಗುತ್ತಿರುವುದು ಇದು 2ನೇ ಸಲ. 2020ರ ಸೆ.16ರಂದು (ಕೋವಿಡ್‌ ಮೊದಲನೇ ಅಲೆ ವೇಳೆ) ಅವರಿಗೆ ಸೋಂಕು ತಾಗಿತ್ತು.

ಪ್ರತಿನಿತ್ಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಮುಖ್ಯಮಂತ್ರಿಗಳು, ಸೋಮವಾರ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್‌ ಪಾಟೀಲ್‌ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಗೊಳಗಾಗಿದ್ದರು. ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ. ಹೀಗಾಗಿ ಹೋಂ ಕ್ವಾರಂಟೈನ್‌ ಆಗಿದ್ದಾರೆ. ಕೊವಿಡ್‌ ಸೋಂಕು ಇರುವ ಬಗ್ಗೆ ಮುಖ್ಯಮಂತ್ರಿಗಳು ಸ್ವತಃ ಟ್ವೀಟ್‌ ಮೂಲಕ ದೃಢಪಡಿಸಿದ್ದಾರೆ.