Asianet Suvarna News Asianet Suvarna News

ವಿದೇಶದಲ್ಲಿ ಲಕ್ಷ ಲಕ್ಷ ಸಂಬಳದ ಕೆಲಸಕ್ಕೆ ಗುಡ್‌ ಬೈ ಹೇಳಿ ಮೀನಿನ ವ್ಯಾಪಾರ ಶುರು ಮಾಡಿದ ಯುವಕ

ವಿದೇಶದಲ್ಲಿ ಓದಿದವರು, ವಿದೇಶದಲ್ಲಿ ಕೆಲಸ ಮಾಡಿದವರು, ಕೈತುಂಬಾ ಸಂಬಳ ಪಡೆಯುವವರು ಭಾರತಕ್ಕೆ ವಾಪಸ್ಸಾಗುವುದು ಅಪರೂಪ. ಮಂಗಳೂರಿನ ವರುಣ್ ಎಂಬ ಯುವಕ ಲಕ್ಷ ಲಕ್ಷ ಸಂಬಳ ಇದ್ರೂ ಲಂಡನ್ ಬಿಟ್ಟು ಮಂಗಳೂರಿಗೆ ಬಂದು 'ಕಡಲ್' ಎಂಬ ಮೀನಿನ ವ್ಯಾಪಾರ ಶುರು ಮಾಡಿದ್ದಾರೆ. 

Nov 28, 2020, 12:55 PM IST

ಬೆಂಗಳೂರು (ನ. 28): ವಿದೇಶದಲ್ಲಿ ಓದಿದವರು, ವಿದೇಶದಲ್ಲಿ ಕೆಲಸ ಮಾಡಿದವರು, ಕೈತುಂಬಾ ಸಂಬಳ ಪಡೆಯುವವರು ಭಾರತಕ್ಕೆ ವಾಪಸ್ಸಾಗುವುದು ಅಪರೂಪ. ಮಂಗಳೂರಿನ ವರುಣ್ ಎಂಬ ಯುವಕ ಲಕ್ಷ ಲಕ್ಷ ಸಂಬಳ ಇದ್ರೂ ಲಂಡನ್ ಬಿಟ್ಟು ಮಂಗಳೂರಿಗೆ ಬಂದು 'ಕಡಲ್' ಎಂಬ ಮೀನಿನ ವ್ಯಾಪಾರ ಶುರು ಮಾಡಿದ್ದಾರೆ. 

ಕಡಕ್‌ನಾಥ್ ಕೋಳಿ ಮಾಂಸ ಬೆಂಗಳೂರಿನಲ್ಲಿ ಲಭ್ಯ! ಬನ್ನಿ ಆಸ್ವಾದಿಸಿ!

ವಿದೇಶದ ಉದ್ಯೋಗಕ್ಕೆ ಗುಡ್‌ಬೈ ಹೇಳಿ ತನ್ನ ಊರಿನಲ್ಲಿ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ಧಾನೆ. ವರುಣ್ ನ ಈ ಸಾಹಸಕ್ಕೆ ಗೆಳೆಯರು, ಹಿತೈಶಿಗಳು ಬೆಂಬಲ ನೀಡಿದ್ದಾರೆ. ಈತನ ಸಾಧನೆಗೆ ನಾವೂ ಗುಡ್‌ ಲಕ್ ಹೇಳೋಣ..