Asianet Suvarna News Asianet Suvarna News

17 ವರ್ಷಗಳಿಂದ ವಿದ್ಯುತ್‌ನಲ್ಲಿ ಆತ್ಮನಿರ್ಭರತೆ ಸಾಧಿಸಿರುವ ಪುತ್ತೂರಿನ ಕೃಷಿಕ

- ವಿದ್ಯುತ್ ಬೆಲೆಯೇರಿಕೆ ಬಿಸಿಯಿಲ್ಲ, ರೈತರಿಂದಲೇ ವಿದ್ಯುತ್ ಉತ್ಪಾದನೆ!

- 17  ವರ್ಷಗಳಿಂದ ವಿದ್ಯುತ್‌ನಲ್ಲಿ ಆತ್ಮನಿರ್ಭರತೆ ಸಾಧಿಸಿರುವ ಪುತ್ತೂರಿನ ಕೃಷಿಕ

- ಕಿರು ಜಲವಿದ್ಯುತ್ ಘಟಕ ಆರಂಭಿಸಿ ವಿದ್ಯುತ್ ಸ್ವಾವಲಂಬನೆ ಸಾಧಿಸಿದ ರೈತ

 

ಮಂಗಳೂರು (ಜೂ. 30): ಕೊರೋನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ವಿದ್ಯುತ್ ಬೆಲೆ ಏರಿಕೆ ಮಾಡಿರುವದನ್ನು ಎಲ್ಲೆಡೆ ವಿರೋಧಿಸಲಾಗುತ್ತಿದೆ. ಆದರೆ ದಕ್ಷಿಣ ಕನ್ನಡದ ರೈತರೊಬ್ಬರಿಗೆ ವಿದ್ಯುತ್ ಬಿಲ್‌ನ ತಲೆಬಿಸಿಯೇ ಇಲ್ಲ! ಮನಸ್ಸಿದ್ದರೆ ಮಾರ್ಗವೆಂಬಂತೆ ಸರ್ಕಾರದ ಹಂಗಿಲ್ಲದೆ ಮಳೆಗಾಲದಲ್ಲಿ ಸ್ವತಃ ವಿದ್ಯುತ್ ಉತ್ಪಾದಿಸುತ್ತಿದ್ದಾಾರೆ. ಇವರು ಎಂಜಿನಿಯರ್ ಅಲ್ಲ, ಆದರೆ ಕಳೆದ 17 ವರ್ಷಗಳಿಂದ ವಿದ್ಯುತ್ ಉತ್ಪಾಾದಿಸುತ್ತಿರುವುದೇ ವಿಶೇಷ.

3 ನೇ ಅಲೆ: ದೊಡ್ಡಬಳ್ಳಾಪುರದಲ್ಲಿ ರೆಡಿಯಾಗುತ್ತಿದೆ ದೇಶದ ಮೊದಲ ಮಾಡ್ಯುಲರ್ ಆಸ್ಪತ್ರೆ

ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪ್ರಗತಿಪರ ಕೃಷಿಕ ಬಲ್ನಾಡು ಸುರೇಶ್ ಅವರು ಮಳೆಗಾಲ ಆರಂಭದ ಜೂನ್ ತಿಂಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದರೆ ಆರು ತಿಂಗಳ ಕಾಲ ಸ್ವಂತ ವಿದ್ಯುತ್‌ನಲ್ಲೇ ಬೆಳಕು ಕಾಣುತ್ತಿದ್ದಾರೆ. ಕಡಿಮೆ ಖರ್ಚಿನಲ್ಲೇ ವಿದ್ಯುತ್ ಉತ್ಪಾದಿಸುವ ಮೂಲಕ ರೈತರಿಗೆ ಪ್ರೇರಣೆಯಾಗಿದ್ದಾರೆ. ಜಲವಿದ್ಯುತ್ ಘಟಕದ ಮೂಲಕ ವಿದ್ಯುತ್ ಆತ್ಮನಿರ್ಭರತೆ ಸಾಧಿಸಿ ಇತರ ರೈತರಿಗೆ ಮಾದರಿಯಾಗಿದ್ದಾಾರೆ. ಅರೇ, ಹೇಗ್ರಿ ಇವೆಲ್ಲಾ ಅಂತೀರಾ..? ಈ ವಿಶೇಷ ವರದಿ ನೋಡಿ..

Video Top Stories