ಕೊರೊನಾ ನೆಗೆಟಿವ್ ಬಂದ್ರೂ ಗರ್ಭಿಣಿಗೆ ಸಿಗಲಿಲ್ಲ ಚಿಕಿತ್ಸೆ; ಹೊಟ್ಟೆಯಲ್ಲೇ ಮಗು ಸಾವು..!

ಕೊರೊನಾ ಭಯದ ನಡುವೆ ಒಂದು ಅಮಾನವೀಯ ಘಟನೆ ನಡೆದಿದೆ. ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿ ನೆರವಿಗೆ ವೈದ್ಯರು ಧಾವಿಸಲೇ ಇಲ್ಲ. ಎರಡು ಜೀವದ ಜೊತೆ ಮಂಗಳೂರು ವೈದ್ಯರು ಚೆಲ್ಲಾಟವಾಡಿದ್ದಾರೆ. ಗರ್ಭಣಿಗೆ ಸೂಕ್ತ ಚಿಕಿತ್ಸೆ ಸಿಗದೇ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ. 
 

First Published May 28, 2020, 11:11 AM IST | Last Updated May 28, 2020, 11:22 AM IST

ಬೆಂಗಳೂರು (ಮೇ. 28): ಕೊರೊನಾ ಭಯದ ನಡುವೆ ಒಂದು ಅಮಾನವೀಯ ಘಟನೆ ನಡೆದಿದೆ. ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿ ನೆರವಿಗೆ ವೈದ್ಯರು ಧಾವಿಸಲೇ ಇಲ್ಲ. ಎರಡು ಜೀವದ ಜೊತೆ ಮಂಗಳೂರು ವೈದ್ಯರು ಚೆಲ್ಲಾಟವಾಡಿದ್ದಾರೆ. ಗರ್ಭಣಿಗೆ ಸೂಕ್ತ ಚಿಕಿತ್ಸೆ ಸಿಗದೇ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ. 

ಇವರು ಮೇ 12 ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದರು. ಅವರನ್ನು ಹೊಟೇಲ್ ಕ್ವಾರಂಟೈನ್‌ ಮಾಡಲಾಗಿತ್ತು. ಮರುದಿನ ನಡೆದ ಕೊರೋನಾ ಟೆಸ್ಟ್‌ನಲ್ಲಿ ಗರ್ಭಿಣಿಗೆ ನೆಗೆಟಿವ್ ಬಂದಿತ್ತು. ನೆಗೆಟಿವ್ ಬಂದಿದ್ರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. 

"