Asianet Suvarna News Asianet Suvarna News

ಬಂಧಿತ ಮಹಾಂತೇಶ್ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಲ್ಲ ಎಂದ ಪ್ರಿಯಾಂಕ್ ಖರ್ಗೆ!

ಕಲಬುರಗಿಯಲ್ಲಿ ಮಾತನಾಡಿರುವ ಮಹಾಂತೇಶ್, ಬಂಧಿತನಾಗಿರುವ ಮಹಾಂತೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಲ್ಲ, ಆತ ನಮ್ಮ ಕಾರ್ಯಕರ್ತನೇ ಆಗಿರಲಿ ಬೇರೆ ಏನೇ ಆಗಿರಲಿ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರು (ಏ.23): ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮಕ್ಕೆ(PSI Recruitment Scam) ಸಂಬಂಧಿಸಿದಂತೆ ಬಂಧಿತನಾಗಿರುವ ಮಹಾಂತೇಶ್ (Mahantesh) ಬ್ಲಾಕ್ ಕಾಂಗ್ರೆಸ್ (Block Congress) ಅಧ್ಯಕ್ಷನಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ( Priyank Kharge) ಹೇಳಿದ್ದಾರೆ.

2019ರಲ್ಲೇ ಮಹಾಂತೇಶ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮಹಾಂತೇಶ್ ನಮ್ಮ ಕಾರ್ಯಕರ್ತ ಅಲ್ಲ ಎಂದು ಹೇಳುತ್ತಿಲ್ಲ. ಅವನು ನಮ್ಮ ಕಾರ್ಯಕರ್ತ ಆಗಿದ್ದರೂ, ತಪ್ಪು ಮಾಡಿದ್ದಾನೆ ಎಂದಾದ ಮೇಲೆ ಯಾರನ್ನೂ ಬಿಡಬೇಡಿ. ಅವರಿಗೆ ಕಾನೂನು ರೀತಿಯಲ್ಲಿ ತಕ್ಕ ಶಿಕ್ಷೆ ನೀಡಿ ಎಂದು ಮಾಜಿ ಸಚಿವ ಹೇಳಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ..!

ಕಲರಬುರಗಿಯಲ್ಲಿ  ಮಾತನಾಡಿದ ಪ್ರಿಯಾಂಕ್ ಖರ್ಗೆ, ಇಲ್ಲಿ ಪಕ್ಷ ಮುಖ್ಯ ಅಲ್ಲ. ತಪ್ಪಿಸ್ಥರ ವಿರುದ್ಧ ಮೊದಲು ಕ್ರಮವಾಗಲಿ. ಬಿಜೆಪಿ ಅವರ ರೀತಿ ದಿವ್ಯಾ ಹಾಗರಗಿ ಅವರನ್ನು ಪಕ್ಷದವರನ್ನೇ ತಮ್ಮವರಲ್ಲ ಎಂದು ನಾವು ಹೇಳೋದಿಲ್ಲ. ನಮಗೆ ನೈತಿಕತೆ ಇದೆ. ಇದು ನಮ್ಮ ಹುಡುಗರ ಭವಿಷ್ಯದ ಪ್ರಶ್ನೆ ಎಂದು ಪ್ರತಿಕ್ರಿಯಿಸಿದ್ದಾರೆ.

Video Top Stories