Asianet Suvarna News Asianet Suvarna News

ಕೊರೊನಾದಿಂದ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಜಾಗವೇ ಇಲ್ಲ; ಚಿತಾಗಾರದ ಮುಂದೆ ಕ್ಯೂ..!

ಕೊರೊನಾದಿಂದ ಸತ್ತರೆ ಸರಿಯಾಗಿ ಅಂತ್ಯಸಂಸ್ಕಾರವೂ ಇಲ್ಲ. ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೆಬ್ಬಾಳ, ಬನಶಂಕರಿ ಚಿತಾಗಾರದ ಎದುರು ಹತ್ತಾರು ಆಂಬುಲೆನ್ಸ್‌ಗಳು ಕಾಯುತ್ತಿವೆ. ಜಾಗವೇ ಸಿಗದೇ ಆಂಬುಲೆನ್ಸ್‌ನಲ್ಲೇ ಶವ ಇಟ್ಟುಕೊಂಡು ಕಾಯುವಂತಾಗಿದೆ. ಇಷ್ಟೊಂದು ಅವ್ಯವಸ್ಥೆ ಆದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಸರಿಯಾದ ವ್ಯವಸ್ಥೆ ಮಾಡಿಲ್ಲ. 

ಬೆಂಗಳೂರು (ಜು. 18): ಕೊರೊನಾದಿಂದ ಸತ್ತರೆ ಸರಿಯಾಗಿ ಅಂತ್ಯಸಂಸ್ಕಾರವೂ ಇಲ್ಲ. ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೆಬ್ಬಾಳ, ಬನಶಂಕರಿ ಚಿತಾಗಾರದ ಎದುರು ಹತ್ತಾರು ಆಂಬುಲೆನ್ಸ್‌ಗಳು ಕಾಯುತ್ತಿವೆ. ಜಾಗವೇ ಸಿಗದೇ ಆಂಬುಲೆನ್ಸ್‌ನಲ್ಲೇ ಶವ ಇಟ್ಟುಕೊಂಡು ಕಾಯುವಂತಾಗಿದೆ.

ಇಷ್ಟೊಂದು ಅವ್ಯವಸ್ಥೆ ಆದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಸರಿಯಾದ ವ್ಯವಸ್ಥೆ ಮಾಡಿಲ್ಲ. ಮಾಧ್ಯಮದ ಮುಂದೆ ಮಾತ್ರ ಅಂತ್ಯಸಂಸ್ಕಾರಕ್ಕೆ 36 ಎಕರೆ ಪ್ರದೇಶ ಕಾಯ್ದಿರಿಸಿದ್ದೇವೆ. ಯಾವುದೇ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆಯೇ ವಿನಃ ಯಾವುದೂ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಇನ್ನಾದರೂ ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕಿದೆ. 

ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಶೇ. 50% ಬೆಡ್‌ಗಳ ಮೀಸಲು