Asianet Suvarna News Asianet Suvarna News

News Hour: ಕಾಂಗ್ರೆಸ್‌ನ 17 ಹೆಸರು ಫೈನಲ್‌, 4 ಪೆಂಡಿಂಗ್‌!

ಮುಂದಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ 2ನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
 

First Published Mar 20, 2024, 11:21 PM IST | Last Updated Mar 20, 2024, 11:22 PM IST

ಬೆಂಗಳೂರು (ಮಾ.20): ಮುಂದಿನ ಲೋಕಸಭೆ ಚುನಾವನೆಗೆ ಯಾವುದೇ ಕ್ಷಣದಲ್ಲಿ ಕಾಂಗ್ರೆಸ್‌ನ 2ನೇ ಪಟ್ಟಿ ಬಿಡುಗಡೆಯಾಗಬಹುದು.  17 ಕ್ಷೇತ್ರಕ್ಕೆ ಹೆಸರು ಫೈನಲ್ ಆಗಿದ್ದು,  ನಾಲ್ಕು ಕ್ಷೇತ್ರ ಪೆಂಡಿಂಗ್​  ಇದೆ. ಐದು ಕ್ಷೇತ್ರದಲ್ಲಿ ಸಚಿವರ ಬದಲು ಮಕ್ಕಳ ಸ್ಪರ್ಧೆ ಖಚಿತವಾಗಿದೆ.

ಇನ್ನು ಕಾಂಗ್ರೆಸ್​ ಪಟ್ಟಿಗೂ ಮುನ್ನವೇ ಅಸಮಾಧಾನ ಸ್ಫೋಟಗೊಂಡಿದೆ. ಖರ್ಗೆ ಮನೆ ಎದುರು ವೀಣಾ ಕಾಶಪ್ಪನವರ್ ಕಣ್ಣೀರಿಟ್ಟಾರೆ. ಕೋಲಾರ ಟಿಕೆಟ್​ಗಾಗಿ ಮುನಿಯಪ್ಪ, ರಮೇಶ್ ಬಣ ಬಡಿದಾಟ ಶುರುವಾಗಿದೆ.

ಲೋಕಸಭಾ ಚುನಾವಣೆ 2024: 15 ಕ್ಷೇತ್ರಗಳಿಗೆ ಕಾಂಗ್ರೆಸ್‌ನ ಒಂದು ಹೆಸರಿನ ಪಟ್ಟಿ ಸಿದ್ಧ, ಪಟ್ಟಿ ಇಲ್ಲಿದೆ

ಇನ್ನೊಂದೆಡೆ, ಮಾರ್ಚ್​ 22ಕ್ಕೆ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ  ಆಗುವ ಸಾಧ್ಯತೆ ಇದೆ.  ಜೆಡಿಎಸ್​ಗೆ ಮೂರು ಕ್ಷೇತ್ರ ಕೊಡಲು ಕೊನೆಗೂ ಒಪ್ಪಿಗೆ ನೀಡಲಾಗಿದೆ. ಮಂಡ್ಯದಲ್ಲೇ ರಾಜಕೀಯ ಎಂದು ಸಂಸದೆ ಸುಮಲತಾ ಎಚ್ಚರಿಕೆ ನೀಡಿದ್ದಾರೆ.