Hijab Row: ವಿಚಾರ ಕೋರ್ಟ್‌ನಲ್ಲಿದೆ, ಆದೇಶ ಬರುವವರೆಗೆ ಶಾಂತಿ ಕಾಪಾಡಿ: ಯದುವೀರ್

 ಹಿಜಾಬ್(Hijab) ವಿಚಾರ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶವನ್ನು ನಾವೆಲ್ಲರೂ ಪಾಲಿಸಬೇಕು.  ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಕೋರ್ಟ್ ಆದೇಶ ಬರುವವರೆಗೆ ಶಾಂತಿ ಕಾಪಾಡಿ' ಎಂದು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಒಡೆಯರ್‌(Yaduveer Krishnadatta Wadiyar) ಹೇಳಿದ್ದಾರೆ. 
 

First Published Feb 19, 2022, 1:36 PM IST | Last Updated Feb 19, 2022, 1:36 PM IST

ಬೆಂಗಳೂರು (ಫೆ. 19):  ಹಿಜಾಬ್(Hijab) ವಿಚಾರ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶವನ್ನು ನಾವೆಲ್ಲರೂ ಪಾಲಿಸಬೇಕು.  ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಕೋರ್ಟ್ ಆದೇಶ ಬರುವವರೆಗೆ ಶಾಂತಿ ಕಾಪಾಡಿ' ಎಂದು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಒಡೆಯರ್‌(Yaduveer Krishnadatta Wadiyar) ಹೇಳಿದ್ದಾರೆ. 

 ಯಾರು ಏನೇ ಹೇಳಿದರೂ ಧರ್ಮವನ್ನು ದೊಡ್ಡಮಟ್ಟದಲ್ಲಿ ಬೆಳೆಸಬೇಕು, ಧರ್ಮ ಉಳಿಸಲು ಎಲ್ಲರೂ ಒಂದಾಗಬೇಕು. ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆಯು(Mysuru Palace) ಹಿಂದೆಯೂ ಸದಾ ಸಿದ್ಧವಾಗಿತ್ತು, ಈಗಲೂ ಸಿದ್ಧವಾಗಿದ್ದೇವೆ ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಒಡೆಯರ್‌(Yaduveer Krishnadatta Wadiyar) ಹೇಳಿದ್ದರು.