ಬೆಳಗಾವಿ ಬಳಿಕ ಉಡುಪಿಯಲ್ಲೂ ಚಿರತೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

ಬೆಳಗಾವಿ ಚಿರತೆ ಕಾಟ ಇನ್ನೂ ಮುಂದುವರೆದಿರುವ ಬೆನ್ನಲ್ಲೆ ಇದೀಗ ಉಡುಪಿ ಜಿಲ್ಲೆಯಲ್ಲೂ ಚಿರತೆ ಕಾಟ ಆರಂಭವಾಗಿದ್ದು, ಜಿಲ್ಲೆಯ ಕೋಟ ಮೂಡುಗಿಳಿಯಾರು ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಠಿಸಿದೆ. ಮೂಡುಗಿಳಿಯಾರು ಸಣ್ಣ ಬಸವನಕಲ್ಲು ಪ್ರದೇಶದ ರಸ್ತೆ ಬದಿಯ ಪೊದೆಯ ಬಳಿ ಚಿರತೆ ಪತ್ತೆಯಾಗಿದೆ.

First Published Aug 26, 2022, 1:58 PM IST | Last Updated Aug 26, 2022, 1:58 PM IST

ಉಡುಪಿ (ಆ.26): ಬೆಳಗಾವಿ ಚಿರತೆ ಕಾಟ ಇನ್ನೂ ಮುಂದುವರೆದಿರುವ ಬೆನ್ನಲ್ಲೆ ಇದೀಗ ಉಡುಪಿ ಜಿಲ್ಲೆಯಲ್ಲೂ ಚಿರತೆ ಕಾಟ ಆರಂಭವಾಗಿದ್ದು, ಜಿಲ್ಲೆಯ ಕೋಟ ಮೂಡುಗಿಳಿಯಾರು ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಠಿಸಿದೆ. ಮೂಡುಗಿಳಿಯಾರು ಸಣ್ಣ ಬಸವನಕಲ್ಲು ಪ್ರದೇಶದ ರಸ್ತೆ ಬದಿಯ ಪೊದೆಯ ಬಳಿ ಚಿರತೆ ಪತ್ತೆಯಾಗಿದೆ. ಶಾಲಾ ವಿದ್ಯಾರ್ಥಿಗಳು ಮನೆಗೆ ತೆರಳುವ ವೇಳೆ ಚಿರತೆ ಕಾಣಿಸಿಕೊಂಡಿದ್ದು, ಚಿರತೆ ವಿಡಿಯೋ ಸ್ಥಳಿಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕಳೆದ ವರ್ಷಇದೇ ಪರಿಸರದಲ್ಲಿ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿತ್ತು, ಬಳಿಕ ಇದೀಗ ಚಿರತೆ ಪ್ರತ್ಯಕ್ಷವಾದ ಬೆನ್ನಲ್ಲೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಚಿರತೆ ಪತ್ತೆಯಾದ ಕುರಿತು ಅರಣ್ಯ ಇಲಾಖೆ ಸ್ಥಳೀಯರ ದೂರು ನೀಡಿದ್ದಾರೆ. ಈ ಪ್ರದೇಶದಲ್ಲಿ ಜನಸಂಚಾರ ಹೆಚ್ಚಾಗಿರುವ ಕಾರಣ ಅರಣ್ಯ ಇಲಾಖೆ ಕೂಡಲೇ ಚಿರತೆ ಹಿಡಿಯಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.