ಭೂ ವಿವಾದ: ಬಿಜೆಪಿ ಶಾಸಕನ ಬೆಂಬಲಿಗರಿಂದ ಮಹಿಳೆ ಮೇಲೆ ಹಲ್ಲೆ
ಜಮೀನು ವಿವಾದ, ಮನೆಗೆ ನುಗ್ಗಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿ ಘಟನೆ ನಡೆದಿದೆ.
ಬೆಂಗಳೂರು (ಮಾ. 23): ಜಮೀನು ವಿವಾದ, ಮನೆಗೆ ನುಗ್ಗಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿ ಘಟನೆ ನಡೆದಿದೆ.
ತರಿಕೆರೆಯ ಲಕ್ಕವಳ್ಳಿಯಲ್ಲಿ ಮಮತಾ ಅವರದ್ದು 50 ಎಕರೆ ತೋಟವಿದೆ. ಜಮೀನಿಗೆ ಸಂಬಂಧಿಸಿದ ವಿವಾದ ಕೋರ್ಟ್‌ನಲ್ಲಿದೆ. ತರೀಕೆರೆ ಬಿಜೆಪಿ ಶಾಸಕ ಸುರೇಶ್ ಬೆಂಬಲಿಗರು ಮಮತಾಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ವಿಜಯೇಂದ್ರ ತರಿಕೆರೆಗೆ ಭೇಟಿ ಕೊಟ್ಟಾಗ, ನಮಗೆ ನ್ಯಾ ಕೊಡಿ, ಇಲ್ಲವೇ ದಯಾಮರಣ ಕೊಡಿ ಎಂದು ಕಣ್ಣಿರು ಹಾಕಿದ್ದಾರೆ.