Asianet Suvarna News Asianet Suvarna News

ಸರ್ಕಾರಿ ಜಮೀನು ಒತ್ತುವರಿ ಆರೋಪ, ತಹಶೀಲ್ದಾರ್ ದಾಳಿ, ಜೆಸಿಬಿ ವಶಕ್ಕೆ

Aug 3, 2020, 5:53 PM IST

ಬೆಂಗಳೂರು (ಆ. 03): ಲಾಕ್‌ಡೌನ್ ನಡುವೆ ಬಿಲ್ಡರ್‌ವೊಬ್ಬರ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಮಾಡಿ ಲೇಔಟ್ ಮತ್ತು ಗಣಿಗಾರಿಕೆ ಆರೋಪ ಕೇಳಿ ಬಂದಿದೆ.  ಗಣಿಗಾರಿಕೆ ನಡೆಸುತ್ತಿದ್ದ ಜಮೀನಿನ ಮೇಲೆ ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 

ಬೆಂಗಳೂರು ಉತ್ತರ ತಾಲೂಕಿನ  ಸಾದೇನಹಳ್ಳಿ ಸರ್ವೆ ನಂಬರ್ 30 ರಲ್ಲಿನ 2 ಎಕರೆ ಜಮೀನು ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ.  ಸಾರ್ವಜನಿಕರಿಂದ ವ್ಯಾಪಾಕ ದೂರುಗಳು ಬಂದ ಹಿನ್ನೆಲೆ ಭಾನುವಾರ ನಡೆದ ದಾಳಿ ನಡೆಸಲಾಗಿದ್ದು,  ಮೇಲ್ನೋಟಕ್ಕೆ ಸರ್ಕಾರಿ ಜಮೀನು ಒತ್ತುವರಿ ಕಂಡು ಬಂದ ಹಿನ್ನೆಲೆ   ಜೆಸಿಬಿ ಹಿಟಾಚಿಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ.