Watch: ಸಿ.ಟಿ. ರವಿ Vs ಲಕ್ಷ್ಮೀ ಹೆಬ್ಬಾಳ್ಕರ್; ಅಸಲಿಗೆ ವಿಧಾನ ಪರಿಷತ್‌ನಲ್ಲಿ ನಡೆದಿದ್ದೇನು?
ಸಿ.ಟಿ.ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಗ್ವಾದವು ಸದನದಲ್ಲಿ ಹೈಡ್ರಾಮಕ್ಕೆ ಕಾರಣವಾಯಿತು. ಈ ಘಟನೆಯು ಸಿ.ಟಿ.ರವಿ ಅವರ ಬಂಧನ ಹಾಗೂ ಅಂತ್ಯಗೊಂಡಿತು. ಆದರೆ, ಅಸಲಿಯಾಗಿ ವಿಧಾನ ಪರಿಷತ್‌ನಲ್ಲಿ ನಡೆದಿದ್ದೇನು ಗೊತ್ತಾ? ಇಲ್ಲಿದೆ ನೋಡಿ ವಿವರ..
ಬೆಳಗ್ಗೆ ಆರೋಪ.. ಮಧ್ಯಾಹ್ನಾ ಜೋರಾದ ಜಟಾಪಟಿ.. ಸಂಜೆ ವೇಳೆಗೆ ಅರೆಸ್ಟ್. ಸಿ.ಟಿ.ರವಿ ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಸದನದೊಳಗೆ ಆರಂಭವಾದ ಸಂಘರ್ಷವೀಗ ನೆಕ್ಸ್ಟ್ ಲೆವೆಲ್ಗೆ ಹೋಗಿದೆ. ಕೇಸರಿ ಕಟ್ಟಾಳಿನಂತಿದ್ದ ಸಿ.ಟಿ.ರವಿಯವರನ್ನು ಪೊಲೀಸರು ಬಂಧಿಸಿದ್ದಾರೆ.. ಅದೊಂದು ಪದದ ಆರೋಪ, ಕೋಪ ತರಿಸ್ತು..ಕಣ್ಣೀರನ್ನ ತರಿಸ್ತು.. ಸುವರ್ಣಸೌಧದ ಮೊಗಸಾಲೆಯಲ್ಲೇ ಮಹಾಯುದ್ಧವೇ ಅದ್ರಿಂದ ನಡೆದು ಹೋಯ್ತು.. ಹಾಗಿದ್ರೆ ಆ ಆಶ್ಲೀಲ ಪದದ ಸುತ್ತಲೂ ನಡೆದ ಸದನ ಕದನದ ಕಥನ ಹೇಗಿತ್ತು..? ಗುರುವಾರ ಒಂದೇ ದಿನ ಏನೆಲ್ಲಾ ಹೈಡ್ರಾಮಗಳು ನಡೆದು ಬಿಟ್ವು..? ಅನ್ನೋದನ್ನ ತೋರಿಸ್ತೀವಿ.
ಇದು ಇಲ್ಲಿಗೆ ಮುಗೀಲಿಲ್ಲ. ಸದನ ಮತ್ತೆ ಆರಂಭವಾದಾಗಲೂ ಸಿ.ಟಿ.ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಮತ್ತೆ ಮಾತಿನ ಯುದ್ಧ ನಡೀತು.. ಆ ವಾಕ್ಸಮರ ಮುಗಿಸಿ ಹೊರ ಬರ್ತಿದ್ದ ಹಾಗೆ ಸಿ.ಟಿ.ರವಿಗೆ ಶಾಕ್ ಕಾದಿತ್ತು. ಹಾಗಿದ್ರೆ ಯಾವುದು ಆ ಶಾಕ್ ಅಂತ ತೋರಿಸ್ತೀವಿ. ಭಾರೀ ಹೈಡ್ರಾಮದ ಬಳಿಕ ಮತ್ತೊಮ್ಮೆ ಪರಿಷತ್ ಕಲಾಪ ಆರಂಭವಾಗಿತ್ತು.. ಆಗಲೂ ಮತ್ತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಮತ್ತೆ ಮಾತಿನ ಜಟಾಪಟಿ ನಡೆಯಿತು.. ಸಿ.ಟಿ.ರವಿ ವಿರುದ್ಧ ಕೈ ನಾಯಕರೆಲ್ಲಾ ಒಂದಾಗಿ ಆಕ್ರೋಶ ಹೊರಹಾಕಿದ್ರು..ಇದೆಲ್ಲಾ ಆಗಿ ಸಿ.ಟಿ.ರವಿ ಹೊರ ಬರ್ತಾ ಇದ್ಹಾಗೆ ಪೊಲೀಸರು ಅವರಿಗಾಗಿ ಕಾದು ಕೂತಿದ್ದರು.
ಸಿ.ಟಿ.ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಸದನದಲ್ಲಿ ಆರಂಭವಾದ ಸಂಘರ್ಷ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಈ ವಿಚಾರವಾಗಿ ಎರಡೂ ಪಕ್ಷಗಳು ರಾಜಕೀಯ ನಾಯಕರ ಮಧ್ಯೆ ವಾಗ್ಯುದ್ಧ ಆರಂಭವಾಗಿದೆ. ಇದೀಗ ಸಿ.ಟಿ. ರವಿ ಅವರು ಬಿಡುಗಡೆ ಆಗಿದ್ದಾರೆ.