Asianet Suvarna News Asianet Suvarna News

ರೈಲ್ವೇ ಆಯ್ತು ಈಗ KSRTC ಬಸ್ ಓಡಾಟ ಆರಂಭ ; ಇಂದಿನಿಂದ ಬುಕಿಂಗ್ ಆರಂಭ

ಕೊರೋನಾ ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಉಳಿದಿರುವ ಹೊರರಾಜ್ಯದ ಪ್ರವಾಸಿಗರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಹೊರರಾಜ್ಯಗಳಿಗೆ ಬಸ್‌ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ.
 

ಬೆಂಗಳೂರು (ಮೇ. 11): ಕೊರೋನಾ ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಉಳಿದಿರುವ ಹೊರರಾಜ್ಯದ ಪ್ರವಾಸಿಗರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಹೊರರಾಜ್ಯಗಳಿಗೆ ಬಸ್‌ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ.

ಬೆಂಗಳೂರು ಸೇರಿ 15 ಕಡೆಗೆ ದಿಲ್ಲಿಯಿಂದ ರೈಲು ; ಇಂದು ಸಂಜೆ 4ರಿಂದ ಆನ್‌ಲೈನ್‌ ಬುಕಿಂಗ್‌ ಶುರು

ಸೇವಾಸಿಂಧು ಇ-ಪಾಸ್‌ ಹೊಂದಿರುವವರು ಹೊರರಾಜ್ಯಗಳಿಗೆ ಈ ಬಸ್‌ನಲ್ಲಿ ಪ್ರಯಾಣಿಸಬಹುದು. ಆಸಕ್ತರು ಕೆಎಸ್‌ಆರ್‌ಟಿಸಿ ಆರಂಭಿಸಿರುವ ಸಹಾಯವಾಣಿಗೆ ಮೇ 11ರಿಂದ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ಹೊರರಾಜ್ಯ ಬಸ್‌ ಸೇವೆ ಆರಂಭವಾಗುವ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಶೀಘ್ರದಲ್ಲೇ ದಿನಾಂಕ ಪ್ರಕಟಿಸುವುದಾಗಿ ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Video Top Stories