ಹೆಚ್ಚುವರಿಯಾಗಿ ದುಡಿಸ್ಕೋತಾರೆ, 4 ತಿಂಗಳಿಂದ ವೇತನ ಇಲ್ಲ; ಕೋಲಾರದಲ್ಲಿ ಕಾರ್ಮಿಕರ ಆಕ್ರೋಶ
ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ, ಕೋಲಾರದಲ್ಲಿ ಮೊಬೈಲ್ ಫೋನ್ ತಯಾರಿಕಾ ಕಂಪನಿಯ ಕಾರ್ಮಿಕರು ಇಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿಯ ಗ್ಲಾಸನ್ನು ಪುಡಿಪುಡಿ ಮಾಡಿದ್ದಾರೆ.
ಬೆಂಗಳೂರು (ಡಿ. 12): ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ, ಕೋಲಾರದಲ್ಲಿ ಮೊಬೈಲ್ ಫೋನ್ ತಯಾರಿಕಾ ಕಂಪನಿಯ ಕಾರ್ಮಿಕರು ಇಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿಯ ಗ್ಲಾಸನ್ನು ಪುಡಿಪುಡಿ ಮಾಡಿದ್ದಾರೆ.
ಕಳೆದ 4 ತಿಂಗಳಿಂದ ಸಂಬಳ ಬಂದಿಲ್ಲ. ದಿನಕ್ಕೆ 12 ತಾಸು ಕೆಲಸ ಮಾಡುತ್ತೇವೆ. 10 ಸಾವಿರ ರೂ ವೇತನವನ್ನೂ ನೀಡುತ್ತಿಲ್ಲ ಎಂದು ಅಲ್ಲಿನ ಕಾರ್ಮಿಕರು ಆರೋಪಿಸಿದ್ದಾರೆ.