ಸಲಿಂಗ ವಿವಾಹವಾದ ಕೊಡಗು ಯುವಕ; ಕೊಡವರಿಂದ ಆಕ್ರೋಶ
ಕೊಡಗಿನ ಯುವಕ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸೆಪ್ಟೆಂಬರ್ 26 ರಂದು ಸಲಿಂಗ ವಿವಾಹವಾಗಿದ್ದಾನೆ. ಕೊಡಗಿನ ಶರತ್ ಪೊನ್ನಪ್ಪ, ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಮದುವೆಯಾಗಿದ್ದಾರೆ.
ಬೆಂಗಳೂರು (ಅ. 07): ಕೊಡಗಿನ ಯುವಕ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸೆಪ್ಟೆಂಬರ್ 26 ರಂದು ಸಲಿಂಗ ವಿವಾಹವಾಗಿದ್ದಾನೆ. ಕೊಡಗಿನ ಶರತ್ ಪೊನ್ನಪ್ಪ, ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಮದುವೆಯಾಗಿದ್ದಾರೆ. ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿವಾಹವಾಗಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಕೊಡವ ಸಮಾಜ ಕೂಡಾ ವಿರೋಧ ವ್ಯಕ್ತವಾಗಿದೆ.