ರಾಯರ ಶ್ರೀಗುರು ವೈಭವೋತ್ಸವಕ್ಕೆ ಚಾಲನೆ, ವೀರೇಂದ್ರ ಹೆಗ್ಗಡೆ, ಕಿಚ್ಚ ಸುದೀಪ್ ಭಾಗಿ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುರಾಯರ 401ನೇ ಪಟ್ಟಾಭಿಷೇಕ ಮಹೋತ್ಸವ ಮತ್ತು 427ನೇ ವರ್ಧಂತಿ ಉತ್ಸವಗಳ ಶ್ರೀಗುರುವೈಭವೋತ್ಸವದ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.
 

First Published Mar 5, 2022, 11:02 AM IST | Last Updated Mar 5, 2022, 11:02 AM IST

ರಾಯಚೂರು (ಮಾ. 05): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುರಾಯರ 401ನೇ ಪಟ್ಟಾಭಿಷೇಕ ಮಹೋತ್ಸವ ಮತ್ತು 427ನೇ ವರ್ಧಂತಿ ಉತ್ಸವಗಳ ಶ್ರೀಗುರುವೈಭವೋತ್ಸವದ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.

ಗುರು ವೈಭವೋತ್ಸವ ಮೊದಲ ದಿನ ರಾಯರ ಪಟ್ಟಾಭಿಷೇಕ ಹಿನ್ನೆಲೆ ಶ್ರೀಗುರುಸಾರ್ವಭೌಮರ ಬೃಂದಾವನಕ್ಕೆ ವಿಶೇಷ ಪೂಜೆ, ಶ್ರೀಮಠದ ಪ್ರಾಕಾರದಲ್ಲಿ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಪಂಡಿತರು ಹಾಗೂ ವಿದ್ವಾಂಸರಿಂದ ಪ್ರವಚನ, ಶ್ರೀಗಳಿಂದ ಮೂಲರಾಮದೇವರಿಗೆ ಸಂಸ್ಥಾನ ಪೂಜಾ ಕೈಂಕಾರ್ಯಗಳು ನಡೆದವು. ಬಳಿಕ ಮಠದ ಪ್ರಾಂಗಣದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂರ್ತಿಗೆ ವಿಶೇಷ ಪೂಜೆ, ಪಾದುಕೆಗಳಿಗೆ ಪೂಜೆ ಕೈಂಕಾರ್ಯಗಳು ಜರುಗಿದವು. ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶ್ರೀರಾಘವೇಂದ್ರ ಸ್ವಾಮಿಗಳ ಸ್ವರ್ಣ ಪಾದುಕೆಗಳಿಗೆ ಮಂತ್ರ-ಘೋಷಗಳ ನಡುವೆ ನಾಣ್ಯಗಳು, ಮುತ್ತು, ರತ್ನಗಳಿಂದ ಅಭಿಷೇಕ ನೇರವೇರಿಸಿ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಸೇವಗಳನ್ನು ಮಾಡಿದರು

ಪಟ್ಟಾಭಿಷೇಕ ಸಮಾರಂಭದಲ್ಲಿ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ಭಾಗಿಯಾಗಿದ್ದರು. ನಟ ಕಿಚ್ಚ ಸುದೀಪ್ ಕೂಡಾ ಭೇಟಿ ನೀಡಿ, ಆಶೀರ್ವಾದ ಪಡೆದರು.