Asianet Suvarna News Asianet Suvarna News

ತಿಮ್ಮಪ್ಪನ ಮೇಲೆ ಭಕ್ತಿ: ತಿರುಪತಿಗೆ 280 KM ನಡೆದು ಕೊಂಡು ಹೋದ ಕಾಂಗ್ರೆಸ್ ಶಾಸಕಿ!

Jan 13, 2020, 3:46 PM IST

ಬೆಂಗಳೂರು (ಜ.13): ಅಯ್ಯಪ್ಪ ದರ್ಶನಕ್ಕೆ ಮಾಲಾಧಾರಿಗಳು ನೂರಾರು ಕಿ.ಮೀ. ನಡೆದುಕೊಂಡು ಹೋಗೋದು ಸಾಮಾನ್ಯ. ಅದರಲ್ಲೂ ಆ ತರಹ ಪಾದಯಾತ್ರೆ ಮಾಡುವವರಲ್ಲಿ ಪುರುಷರೇ ಹೆಚ್ಚು. ಈಗ  ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕಾಲ್ನಡಿಗೆಯಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ | ವಿಡಿಯೋ: ಅಂದು ಬಸ್ ಕಂಡಕ್ಟರ್, ಈಗ ಲಾರಿ ಚಾಲಕನಿಗೆ ಚಳಿ ಬಿಡಿಸಿದ ಅಂಜಲಿ ನಿಂಬಾಳ್ಕರ್...

ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ಕೈಗೊಂಡಿರುವ ಬಗ್ಗೆ ಸ್ವತಃ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಅಧಿಕೃತ ಫೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.