Asianet Suvarna News Asianet Suvarna News

ಸೋಮವಾರದಿಂದ ಅನ್‌ಲಾಕ್‌ 2.0: ಬಿಎಂಟಿಸಿ ಸಂಚಾರ ಆರಂಭ..?

Jun 19, 2021, 2:55 PM IST

ಬೆಂಗಳೂರು (ಜೂ. 19): ಜೂನ್. 21 ರಿಂದ ಎರಡನೇ ಹಂತದ ಅನ್‌ಲಾಕ್  ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಇಂದು ಸಂಜೆ ಈ ಬಗ್ಗೆ ಸಚಿವರ ಜೊತೆ ಸಿಎಂ ಸಭೆ ನಡೆಸಲಿದ್ದು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಜೂ. 21 ರಿಂದ ಅನ್‌ಲಾಕ್‌; ಇಂದು ಸಂಜೆ ಸಿಎಂ ಸಭೆಯಲ್ಲಿ ನಿರ್ಧಾರ

ಅನ್‌ಲಾಕ್ 2.0 ನಲ್ಲಿ ಯಾವುದಕ್ಕೆಲ್ಲಾ ಅನುಮತಿ ಸಿಗಲಿದೆ ಎಂದು ನೋಡುವುದಾದರೆ ಬಿಎಂಟಿಸಿ ಬಸ್ ಸಂಚಾರ ಶುರು ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. ಇದರ ಜೊತೆಗೆ ಮಾರ್ಕೆಟ್, ಕಾಂಪ್ಲೆಕ್ಸ್‌ ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ. ಇಂದಿನ ಸಿಎಂ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬೀಳಲಿದೆ ಎಂದು ಹೇಳಿದ್ದಾರೆ. 

Video Top Stories