Asianet Suvarna News Asianet Suvarna News

ಅನ್‌ಲಾಕ್ 3.0: ಭಕ್ತರಿಗೆ ಸವದತ್ತಿ ಯಲ್ಲಮ್ಮ ದೇಗುಲ ದರ್ಶನಕ್ಕೆ ಅವಕಾಶವಿಲ್ಲ

Jul 5, 2021, 11:06 AM IST

ಬೆಂಗಳೂರು (ಜು. 05): ಮೂರನೇ ಹಂತದ ಲಾಕ್‌ಡೌನ್ ಸಡಿಲಿಕೆಯಲ್ಲಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.  2 ತಿಂಗಳುಗಳಿಂದ ಬಂದ್ ಆಗಿದ್ದ ದೇವಸ್ಥಾನಗಳು ಇಂದಿನಿಂದ ತೆರೆಯಲಿವೆ. ಆದರೆ ಬೆಳಗಾವಿಯಲ್ಲಿ 3 ದೇಗುಲಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ. ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಭೀತಿ ಹೆಚ್ಚಾಗಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ, ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ. ಶಕ್ತಿಪೀಠ ಸವದತ್ತಿ ಯಲ್ಲಮ್ಮ ದೇಗುಲದಲ್ಲಿ ಭಕ್ತರಿಗೆ ಅವಕಾಶ ನೀಡಲಾಗಿಲ್ಲ.

ಇಂದಿನಿಂದ ಧಾರ್ಮಿಕ ಕ್ಷೇತ್ರಗಳು ಓಪನ್: ದರ್ಶನಕ್ಕೆ ಅವಕಾಶ, ವಿಶೇಷ ಪೂಜೆ ಇರುವುದಿಲ್ಲ