5 ದಿನಗಳ ಮಹಾ ಸಾರಿಗೆ ಸಂಗ್ರಾಮ ಅಂತ್ಯ; ಮುಷ್ಕರ ಹಿಂಪಡೆಯಲು ಕೋಡಿಹಳ್ಳಿ ನಿರ್ಧಾರ
ಕಡೆಗೂ 5 ದಿನಗಳ ಮಹಾ ಸಾರಿಗೆ ಸಂಗ್ರಾಮ ಅಂತ್ಯವಾಗಿದೆ. ಮುಷ್ಕರದ ಸಾರಥ್ಯ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಪಸ್ ಪಡೆಯುವ ನಿರ್ಧಾರ ಮಾಡಿದ್ದಾರೆ.
ಬೆಂಗಳೂರು (ಡಿ. 14): ಕಡೆಗೂ 5 ದಿನಗಳ ಮಹಾ ಸಾರಿಗೆ ಸಂಗ್ರಾಮ ಅಂತ್ಯವಾಗಿದೆ. ಮುಷ್ಕರದ ಸಾರಥ್ಯ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಪಸ್ ಪಡೆಯುವ ನಿರ್ಧಾರ ಮಾಡಿದ್ದಾರೆ.
ಕೋಡಿಹಳ್ಳಿ ಮಹಾನ್ ಹೋರಾಟಗಾರ.. ಹಾಡಿ ಹೊಗಳಿದ ಬಿಸಿ ಪಾಟೀಲ್
ಸರ್ಕಾರದ ಬೆದರಿಕೆಗೆ ನಾವು ಬಗ್ಗಲ್ಲ. ಪರಪ್ಪನ ಅಗ್ರಹಾರಕ್ಕೆ ಹೋಗುವುದಕ್ಕೂ ನಾವು ರೆಡಿ. ಸರ್ಕಾರದ ನಿರ್ಧಾರ ನಮಗೆ ಒಪ್ಪಿಗೆ ಇಲ್ಲ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ಮುಷ್ಕರ ವಾಪಸ್ ಪಡೆಯುವ ನಿರ್ಧಾರಕ್ಕೆ ಬರಬೇಕಾಗಿದೆ. ಮುಂದಿನ ರೂಪುರೇಷೆಗಳ ಬಗ್ಗೆ ಮುಖಂಡರ ಜೊತೆ ಚರ್ಚೆ ನಡೆಸಿ ತೀರ್ಮಾನಿಸುತ್ತೇವೆ' ಎಂದು ಕೋಡಿಹಳ್ಳಿ ಚಂದ್ರಶೇಖರ್ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ.