ರಾಜ್ಯದಲ್ಲಿ ಮುಂದುವರಿದ ಶಕ್ತಿ ಯೋಜನೆ ಜಟಾಪಟಿ: ಬಸ್ ಸೀಟಿಗಾಗಿ ಮಹಿಳೆಯರ ಮಾರಾಮಾರಿ
ಮೈಸೂರಿನ ನಗರ ಬಸ್ ನಿಲ್ದಾಣದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣದ ಸೀಟಿಗಾಗಿ ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಮೈಸೂರು (ಜೂ.20): ಮೈಸೂರಿನ ನಗರ ಬಸ್ ನಿಲ್ದಾಣದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣದ ಸೀಟಿಗಾಗಿ ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡ ಹಾಗೂ ಮಾರಾಮಾರಿ ನಡೆದಿ ಘಟನೆ ಮಂಗಳವಾರ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರ ಮಾರಮಾರಿ ನಡೆಸಿದ್ದಾರೆ. ಮೈಸೂರು ಸಿಟಿ ಬಸ್ ನಲ್ಲಿ ಸೀಟ್ ಗಾಗಿ ಮಹಿಳೆಯರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಮಹಿಳೆಯರ ಬಡಿದಾಟದ ವಿಡಿಯೋ ಸೋಷಿಯಲ್ ಮೀಡಿಯಲ್ಲಿ ವೈರಲ್ ಆಗುತ್ತಿದೆ. ಮೈಸೂರು ಸಿಟಿ ಬಸ್ ಸ್ಟ್ಯಾಂಡ್ ನಿಂದ ಚಾಮುಂಡಿ ಬೆಟ್ಟಕ್ಕೆ ಹೊರಟಿದ್ದ ಬಸ್ ನಲ್ಲಿ ಘಟನೆ ನಡೆದಿದೆ. ಮಹೊಳೆಯೊಬ್ಬಳು ಬಸ್ ಹೊರಗಿನಿಂದ ತನ್ನ ದುಪ್ಪಟ ಹಾಕಿ ಸೀಟ್ ರಿಸರ್ವ್ ಮಾಡಿದ್ದಳು. ಆದರೆ, ಮಹಿಳೆ ಪ್ರಯಾಸಪಟ್ಟು ಬಸ್ ಹತ್ತಿ ಬಂದಾಗ ಸೀಟಿನಲ್ಲಿ ಬೇರೆ ಮಹಿಳೆ ಕುಳಿತಿದ್ದಳು. ಈ ವಿಚಾರವಾಗಿ ಶುರುವಾದ ಮಾತಿನ ಚಟಾಪಟಿ, ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಜೊತೆಗೆ, ಇವರೊಂದಿಗೆ ಬಂದಿದ್ದ ಮಹಿಳೆಯರು ಕೂಡ ತಮ್ಮ ಸಹಚರರಿಗೆ ಬೆಂಬಲ ನೀಡಲು ಕೈ-ಕೈ ಮಿಲಾಯಿಸಿದ್ದಾರೆ.