ಬೆಂಗಳೂರಿನಲ್ಲಿ ಭಾರೀ ಮಳೆಯ ಮುನ್ಸೂಚನೆ; ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಕರೆ

ಬೆಂಗಳೂರಿನಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು  ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಬಿಎಸ್‌ವೈ ಸೂಚನೆ ನೀಡಿದ್ದಾರೆ. 

First Published Sep 20, 2020, 4:03 PM IST | Last Updated Sep 20, 2020, 4:03 PM IST

ಬೆಂಗಳೂರು (ಸೆ. 20): ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು  ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಬಿಎಸ್‌ವೈ ಸೂಚನೆ ನೀಡಿದ್ದಾರೆ. 

'ರಾಜಕಾಲುವೆ, ತಗ್ಗುಪ್ರದೇಶಗಳ ಕಡೆ ವಿಶೇಷ ಗಮನ ಹರಿಸಿ. ಎಲ್ಲಾ ಅಧಿಕಾರಿಗಳು ಯಾವುದೇ ಕ್ಷಣದಲ್ಲಾದರೂ ಕಾರ್ಯ ಪ್ರವೃತ್ತರಾಗಲು ಸಿದ್ಧರಿರಬೇಕು' ಎಂದು ಸಿಎಂ ಸೂಚನೆ ನೀಡಿದ್ದಾರೆ. 

ಮಳೆರಾಯ ನಿನ್ನ ಮನೆಕಾಯ! ರಾಜ್ಯದಾದ್ಯಂತ ಮತ್ತೆ ಧಾರಾಕಾರ ಮಳೆ ಶುರು

ಈ ಹಿಂದೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ನಾವು ನೋಡಿದ್ದೇವೆ. ಮಳೆಗಾಲದಲ್ಲಿ ಯಾವುದೇ ಮುನ್ನಚ್ಚರಿಕಾ ಕ್ರಮ ತೆಗೆದುಕೊಳ್ಳದೇ ಜನ ಪರದಾಡುವುದನ್ನು ಕಂಡಿದ್ದೇವೆ. ಜನರ ಆಕ್ರೋಶ ವ್ಯಕ್ತವಾಗುವ ಮುನ್ನ ನಾವು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.