ಮಳೆಯಿಂದಾದ ಮನೆ ಹಾನಿಗೆ 5 ಲಕ್ಷದವರೆಗೆ ಪರಿಹಾರ ಘೋಷಿಸಿದ ಸರ್ಕಾರ

ಮಹಾಮಳೆ ರೌದ್ರಾವಾತಾರಕ್ಕೆ ಕರ್ನಾಟಕ ಅಕ್ಷರಶಃ ನಲುಗಿ ಹೋಗಿದೆ. ಸರ್ಕಾರ ಮಳೆ ಪರಿಹಾರ ಮೊತ್ತವನ್ನು ಘೋಷಿಸಿದೆ. ಮನೆ ಪುನರ್‌ನಿರ್ಮಣ ಹಾಗೂ ದುರಸ್ಥಿ ಕಾರ್ಯಕ್ಕೆ ಪರಿಹಾರ ಘೋಷಿಸಿದೆ. ಗೃಹೋಪಯೋಗಿ ವಸ್ತುಗಳು ಹಾನಿಯಾದ್ರೆ 10 ಸಾವಿರ ರೂ ಪರಿಹಾರ, ಶೇ. 75 ರಷ್ಟು ಮನೆ ಹಾನಿಗೆ 5 ಲಕ್ಷ ರೂ ಘೋಷಣೆಯಾಗಿದೆ. 

First Published Aug 8, 2020, 4:11 PM IST | Last Updated Aug 8, 2020, 4:11 PM IST

ಬೆಂಗಳೂರು (ಅ. 08): ಮಹಾಮಳೆ ರೌದ್ರಾವಾತಾರಕ್ಕೆ ಕರ್ನಾಟಕ ಅಕ್ಷರಶಃ ನಲುಗಿ ಹೋಗಿದೆ. ಸರ್ಕಾರ ಮಳೆ ಪರಿಹಾರ ಮೊತ್ತವನ್ನು ಘೋಷಿಸಿದೆ. ಮನೆ ಪುನರ್‌ನಿರ್ಮಣ ಹಾಗೂ ದುರಸ್ಥಿ ಕಾರ್ಯಕ್ಕೆ ಪರಿಹಾರ ಘೋಷಿಸಿದೆ. ಗೃಹೋಪಯೋಗಿ ವಸ್ತುಗಳು ಹಾನಿಯಾದ್ರೆ 10 ಸಾವಿರ ರೂ ಪರಿಹಾರ, ಶೇ. 75 ರಷ್ಟು ಮನೆ ಹಾನಿಗೆ 5 ಲಕ್ಷ ರೂ ಘೋಷಣೆಯಾಗಿದೆ.

ಉಕ್ಕಿ ಹರಿಯುತ್ತಿದ್ದಾಳೆ ತುಂಗೆ; ಶೃಂಗೇರಿಯ ಕಪ್ಪೆ ಶಂಕರ ದೇವಾಲಯ ಮುಳುಗಡೆ

ಶೇ. 25 ರಿಂದ 75 ರಷ್ಟು ಮನೆಹಾನಿಗೆ 3 ಲಕ್ಷ ರೂ ಘೋಷಣೆಯಾಗಿದೆ. ಶೇ. 15 ರಿಂದ 25 ರಷ್ಟು ಮನೆ ಹಾನಿಗೆ 50 ಸಾವಿರ ರೂ ಪರಿಹಾರ ಘೋಷಿಸಲಾಗಿದೆ. ಜೊತೆಗೆ ಮನೆ ಕಳೆದುಕೊಂಡಿದ್ರೆ ರಾಜೀವ್ ಗಾಂಧಿ ವಸತಿ ನಿಗಮ ಮೂಲಕ ಹಣ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.  

Video Top Stories