ನಾಯಕತ್ವ ಬದಲಾವಣೆ ಕೂಗು: ಸಿಎಂ ಬಿಎಸ್‌ವೈ ಪರ ಕಾವಿ ಕಹಳೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಎದ್ದಿರುವ ಬೆನ್ನಲ್ಲೇ, ಲಿಂಗಾಯತ ಮಠಾಧೀಶರು ಬಿಎಸ್‌ವೈಗೆ ಬೆಂಬಲಿಸಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು (ಜು. 21): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಎದ್ದಿರುವ ಬೆನ್ನಲ್ಲೇ, ಲಿಂಗಾಯತ ಮಠಾಧೀಶರು ಬಿಎಸ್‌ವೈಗೆ ಬೆಂಬಲಿಸಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಇಂದು ಕೂಡಾ ಸಿಎಂ ನಿವಾಸ 'ಕಾವೇರಿ' ಯಲ್ಲಿ ಬಿಎಸ್‌ವೈರನ್ನು ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ತವರು ಜಿಲ್ಲೆ ಶಿವಮೊಗ್ಗದಲ್ಲಿಯೂ ಮಠಾಧೀಶರು ಸಭೆ ನಡೆಸಿ ಬೆಂಬಲ ಸೂಚಿಸಿದ್ದಾರೆ.