Asianet Suvarna News Asianet Suvarna News

News Hour: ಬಿಜೆಪಿ - ಕಾಂಗ್ರೆಸ್ ನಡುವೆ ತಿರಂಗಾ ಪಾಲಿಟಿಕ್ಸ್

ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ನಡುವೆ ತಿರಂಗಾ ವಿಚಾರವಾಗಿ ರಾಜಕೀಯ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇದು ಬಿಜೆಪಿ ನಾಯಕರ ಬೀದಿ ನಾಟಕ ಎಂದು ಲೇವಡಿ ಮಾಡಿದ್ದರೆ, ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ರಾಷ್ಟ್ರಧ್ವಜದ ವಿಚಾರದಲ್ಲೂ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು (ಆ.8): ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹರ್‌ ಘರ್‌ ತಿರಂಗಾ ಎನ್ನುವ ಅಭಿಯಾನವನ್ನು ಘೋಷಣೆ ಮಾಡಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಕಾಂಗ್ರೆಸ್‌ ಫ್ರೀಡಮ್‌ ಮಾರ್ಚ್ಅನ್ನು ಆಯೋಜನೆ ಮಾಡಿದೆ.ಈ ಕುರಿತಂತೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಿಜೆಪಿ ಎಂದಿಗೂ ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟ ಪಕ್ಷವಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಬಿಜೆಪಿ ಅಮೃತ ಮಹೋತ್ಸವವನ್ನು ರಾಜಕೀಯ ಮಾಡುತ್ತಿದೆ. ರಾಷ್ಟ್ರಧ್ವಜವನ್ನು ಖಾದಿ ಅಥವಾ ರೇಷ್ಮೆಯಲ್ಲಿಯೇ ಮಾಡಬೇಕು. ಆದರೆ, ಬಿಜೆಪಿ ಇದನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಹೀಗೆ ಮಾಡಿದರೆ, ಆತ್ಮನಿರ್ಭರ ಯಶಸ್ವಿಯಾಗುತ್ತಾ? ಹೀಗೆ ಮುಂದುವರಿದರೆ, ಭಾರತದ ಕಥೆಯೂ ಶ್ರೀಲಂಕಾದ ರೀತಿ ಆಗಲಿದೆ ಎಂದು ಹೇಳಿದ್ದಾರೆ.

ಬಡ ಮುಸ್ಲಿಮರ ಸೇವಿಂಗ್ಸ್‌ನಲ್ಲಿ ಮೋಜು ಮಾಡಿದ್ರಾ ಜಹಾಂಗೀರ್ ಜಮೀರ್ ಅಹ್ಮದ್ ಖಾನ್?

ಇನ್ನು ಸಿದ್ಧರಾಮಯ್ಯ ಮಾತಿಗೆ ಕಿಡಿಕಾರಿರುವ ಬಿಜೆಪಿ, ಬೀದಿ ನಾಟಕ ಮಾಡುತ್ತಿದ್ದವರು ಈಗ ಬೀದಿ ಪಾಲಾಗಿದ್ದಾರೆ. ಕಾಂಗ್ರೆಸ್‌ ವಿಪಕ್ಷ ಸ್ಥಾನದಲ್ಲಿ ಇರೋಕು ಯೋಗ್ಯವಾಗಿರುವ ಪಕ್ಷವಲ್ಲ. ಅವರು ಬೀದಿ ಬಿಕಾರಿಗಳಾಗಿದ್ದಾರೆ ಎಂದು ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ.

 

 

Video Top Stories