Asianet Suvarna News Asianet Suvarna News

ಸೆಪ್ಟೆಂಬರ್‌ನಲ್ಲಿ ಕೊರೋನಾ ಮತ್ತಷ್ಟು ಸ್ಫೋಟ: ಸಿಎಂ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್

ರಾಜ್ಯಸರ್ಕಾರಕ್ಕೆ ತಜ್ಞರು ಈ ಮಾಹಿತಿಯನ್ನು ತಿಳಿಸಿದ್ಧಾರೆ. ಕೊರೋನಾ ನಿರ್ವಹಣೆಗೆ ಕನಿಷ್ಠ 20 ಸಾವಿರ ಬೆಡ್‌ಗಳು ಬೇಕಾಗಬಹುದು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ S.R. ವಿಶ್ವನಾಥ್ ಇಂತಹದ್ದೊಂದು ಸ್ಪೋಟಕ ಮಾಹಿತಿಯನ್ನು ಸಿಡಿಸಿದ್ದಾರೆ. 
 
ಬೆಂಗಳೂರು(ಜೂ.29): ಕೊರೋನಾ ಸೋಂಕು ಈಗಾಗಲೇ ರಾಜ್ಯದಲ್ಲಿ ದಿನಕ್ಕೆ ಸಾವಿರದ ಆಸುಪಾಸಿಗೆ ಬಂದು ನಿಂತಿದೆ. ಇನ್ನು ಇದರ ಆರ್ಭಟ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಿರುವಾಗಲೇ ಸೆಪ್ಟೆಂಬರ್‌ನಲ್ಲಿ ಕೊರೋನಾ ಮತ್ತಷ್ಟು ಸ್ಫೋಟವಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

ರಾಜ್ಯಸರ್ಕಾರಕ್ಕೆ ತಜ್ಞರು ಈ ಮಾಹಿತಿಯನ್ನು ತಿಳಿಸಿದ್ಧಾರೆ. ಕೊರೋನಾ ನಿರ್ವಹಣೆಗೆ ಕನಿಷ್ಠ 20 ಸಾವಿರ ಬೆಡ್‌ಗಳು ಬೇಕಾಗಬಹುದು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ S.R. ವಿಶ್ವನಾಥ್ ಇಂತಹದ್ದೊಂದು ಸ್ಪೋಟಕ ಮಾಹಿತಿಯನ್ನು ಸಿಡಿಸಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಸ್ಫೋಟ ಗ್ಯಾರಂಟಿ..!

ಸೆಪ್ಟೆಂಬರ್ ವೇಳೆಗೆ ಕೊರೋನಾ ರಾಜ್ಯದಲ್ಲಿ ಉತ್ತುಂಗಕ್ಕೆ ತಲುಪಲಿದ್ದು, ಸೋಂಕಿತರ ಸಂಖ್ಯೆ 40 ಸಾವಿರ ತಲುಪಿದರೂ ಅಚ್ಚರಿಯಿಲ್ಲ. ಈಗಾಗಲೇ ಜನರಲ್ಲಿ ರೋಗ ನಿರೋಧಕತೆ ಹೆಚ್ಚಿದ್ದು, ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಕೊರೋನಾ ನಿರ್ವಹಣೆಗೆ 20 ಸಾವಿರ ಬೆಡ್‌ಗಳ ಅವಶ್ಯಕತೆಯಿದೆ ಎಂದು ವಿಶ್ವನಾಥ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 
Video Top Stories