Asianet Suvarna News Asianet Suvarna News

10 ದಿನ ಬೆಂಗಳೂರು ಲಾಕ್, ರಾಜಧಾನಿಗೆ ಲಾಕ್‌ಡೌನ್ ಶಾಕ್..!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣ ಹಾಗೂ ಸಾವಿನ ಪ್ರಮಾಣ ಹೆಚ್ಚಾಗುತ್ತದೆ.  ಹೀಗೆ ಹೆಚ್ಚಾಗುತ್ತಾ ಹೋದರೆ, ಏಪ್ರಿಲ್ ಅಂತ್ಯದಿಂದ ವೀಕೆಂಡ್‌ ಲಾಕ್‌ಡೌನ್ ಜಾರಿ, ಬಳಿಕವೂ ನಿಯಂತ್ರಣಕ್ಕೆ ಬರದಿದ್ರೆ ಮೇನಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡುವ ಭೀತಿ ಎದುರಾಗಿದೆ. 
 

ಬೆಂಗಳೂರು (ಏ. 12): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣ ಹಾಗೂ ಸಾವಿನ ಪ್ರಮಾಣ ಹೆಚ್ಚಾಗುತ್ತದೆ.  ಹೀಗೆ ಹೆಚ್ಚಾಗುತ್ತಾ ಹೋದರೆ, ಏಪ್ರಿಲ್ ಅಂತ್ಯದಿಂದ ವೀಕೆಂಡ್‌ ಲಾಕ್‌ಡೌನ್ ಜಾರಿ, ಬಳಿಕವೂ ನಿಯಂತ್ರಣಕ್ಕೆ ಬರದಿದ್ರೆ ಮೇನಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡುವ ಭೀತಿ ಎದುರಾಗಿದೆ. 

ಸಾರ್ವಜನಿಕರು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಕೊರೋನಾ ಪರಿಸ್ಥಿತಿ ಕೈಮೀರುವ ಹಂತಕ್ಕೆ ಬಂದರೆ ರಾಜ್ಯದಲ್ಲಿ ಲಾಕ್‌ಡೌನ್‌ ಹೇರುವಂತಹ ಸ್ಥಿತಿ ನಿರ್ಮಾಣವಾಗಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.