Asianet Suvarna News Asianet Suvarna News

ನಾಳೆಯಿಂದ ವಿಧಾನಮಂಡಲ ಅಧಿವೇಶನ ; ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳ ಅಸ್ತ್ರಗಳಿವು

Sep 12, 2021, 11:03 AM IST

ಬೆಂಗಳೂರು (ಸೆ. 12): ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಮುಖ್ಯಮಂತ್ರಿ ಗಾದಿಗೆ ಏರಿದ ನಂತರ ಬಸವರಾಜ ಬೊಮ್ಮಾಯಿ ಅವರು ಎದುರಿಸಲಿರುವ ಮೊಟ್ಟಮೊದಲ ಅಧಿವೇಶನ.

ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಸಿಎಂ ಬೊಮ್ಮಾಯಿ, ಸಿಕ್ಕಿದೆ ಮರೆಯಲಾಗದ ಗಿಫ್ಟ್

ಮಾತಿನ ದಂಗಲ್‌ ಎನಿಸಿದ ವಿಧಾನಮಂಡಲದಲ್ಲಿ ಬೊಮ್ಮಾಯಿ ಅವರನ್ನು ಹೈರಾಣು ಮಾಡಲು ಪ್ರತಿಪಕ್ಷಗಳು ಶ್ರೀಸಾಮಾನ್ಯನ ಬದುಕು ದುರ್ಬರಗೊಳಿಸುತ್ತಿರುವ ಬೆಲೆ ಏರಿಕೆ, ನೆರೆ, ಪಡಿತರದಾರರಿಗೆ ಆಹಾರ ಧಾನ್ಯ ಪ್ರಮಾಣ ಕಡಿತ, ದೇಶವನ್ನೇ ನಡುಗಿಸಿದ ಮೈಸೂರು ಅತ್ಯಾಚಾರ ಪ್ರಕರಣ, ಜಾತಿ ಗಣತಿ ವರದಿ ಜಾರಿಗೆ ಆಗ್ರಹ, ಕೋವಿಡ್‌ ಸಂಕಷ್ಟಕ್ಕೆ ಸಿಲುಕಿದ ಸಣ್ಣ ಸಮುದಾಯಗಳಿಗೆ ಇನ್ನೂ ದೊರೆಯದ ನೆರವು ಹಾಗೂ ಕುಸಿಯುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಅಸ್ತ್ರ ಪ್ರಯೋಗಿಸಲು ಮುಂದಾಗಿವೆ.