Asianet Suvarna News Asianet Suvarna News

ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ, ಅನುಮತಿ ಕಡ್ಡಾಯ!

ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸರ್ಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಹಲವು ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸಬೇಕಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಇಲ್ಲಿದೆ
 

First Published Aug 23, 2022, 6:07 PM IST | Last Updated Aug 23, 2022, 6:07 PM IST

ಸಾವರ್ಕರ್ ಫೋಟೋ ವಿವಾದ ಹೆಚ್ಚಾಗುತ್ತಿದ್ದಂತೆ ಇದೀಗ ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಹೊಸ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅರ್ಜಿ ಬಂದ 3 ದಿನಗಳ ಒಳಗೆ ಪರವಾನಗಿಯನ್ನು ಪಡೆಯಬೇಕು, ಹೈಟೆನ್ಶನ್ ವೈಯರ್ ಇರುವ ಕಡೆ ಗಣೇಶನನ್ನು ಕೂರಿಸುವಂತಿಲ್ಲ. ಸ್ಥಳೀಯ ನಾಗರೀಕರ ಜೊತೆ ಸೌಹಾರ್ಧಯುತ ಸಭೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಮಾರ್ಗಸೂಚಿಯಲ್ಲಿ ಹೇಳಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಯಲ್ಲೇನಿದೆ? ಇಲ್ಲಿದೆ ವಿವರ.