Asianet Suvarna News Asianet Suvarna News

ರಾಜ್ಯ ಪೊಲೀಸರಿಗೆ ದೀಪಾವಳಿ ಬಂಪರ್! ಔರಾದ್ಕರ್ ವರದಿ ಜಾರಿಗೆ ಅಸ್ತು

Oct 19, 2019, 4:18 PM IST

ಬೆಂಗಳೂರು (ಅ.19): ದೀಪಾವಳಿ ಹಬ್ಬಕ್ಕೆ ರಾಜ್ಯದ ಪೊಲೀಸರಿಗೆ ಸರ್ಕಾರ ಬಂಪರ್ ಬಹುಮಾನ ನೀಡಿದೆ. ರಾಘವೇಂದ್ರ ಔರಾದ್ಕರ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ ಶ್ರೇಣಿ ಜೊತೆಗೆ ಕಷ್ಟ ಪರಿಹಾರ ಭತ್ಯೆಯನ್ನು ತಕ್ಷಣ ಜಾರಿಗೆ ಬರುವಂತೆ ಹೆಚ್ಚಿಸುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. 

ಈ ವರದಿ ಜಾರಿಯಿಂದ ಹೊಸದಾಗಿ ಸೇರುವ ಪೊಲೀಸ್ ಪೇದೆಗಳಿಗೆ ಇರುವ ಮಾಸಿಕ ವೇತನ ಒಟ್ಟು ರೂ.30427 ಬದಲಿಗೆ 34267 ರೂಪಾಯಿಗಳಾಗಲಿದೆ.

2016ರಲ್ಲಿ, ಪೊಲೀಸ್ ಇಲಾಖೆ ಹಾಗೂ ಸಿಬ್ಬಂದಿಯ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.