Asianet Suvarna News Asianet Suvarna News

Covid 19: ಕಂಟ್ರೋಲ್‌ಗೆ 11 IAS ಅಧಿಕಾರಿಗಳ ಪಡೆ ಸಜ್ಜು, ವಾರ್‌ ರೂಂಗೆ ಮೌದ್ಗಿಲ್ ನೇತೃತ್ವ

ಕೊರೋನಾ ನಿಯಂತ್ರಣಕ್ಕೆ (Covid 19) 14 ಅಧಿಕಾರಿಗಳ 11 ತಂಡ ರಚಿಸಲಾಗಿದೆ. ರಾಜ್ಯ ಕೋವಿಡ್ ವಾರ್‌ ರೂಂಗೆ (Covid War Room) ಮುನೀಶ್ ಮೌದ್ಗಿಲ್ ನೇತೃತ್ವ, ವಿನೂತ್ ಪ್ರಿಯಾಗೆ ILI, Sari ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವ ಹೊಣೆ, ಶಾಲಿನಿ ರಜನೀಶ್‌ಗೆ ಸ್ಯಾಂಪಲ್ಸ್ ಕಲೆಕ್ಷನ್, ಟೆಸ್ಟಿಂಗ್ ಮೇಲುಸ್ತುವಾರಿ ವಹಿಸಲಾಗಿದೆ. 

ಬೆಂಗಳೂರು(ಜ. 05): ರಾಜ್ಯದಲ್ಲಿ ಕೋವಿಡ್‌ ಸೋಂಕು ನಾಗಾಲೋಟ ಆರಂಭಿಸಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಸೋಂಕು ಬಹುತೇಕ ಡಬಲ್‌ ಆಗಿದೆ. ಸೋಮವಾರ 1,290 ಪ್ರಕರಣ ವರದಿಯಾಗಿದ್ದರೆ, ಮಂಗಳವಾರ ಅದು 2,479ಕ್ಕೆ ತಲುಪಿದೆ. ಮತ್ತೊಂದೆಡೆ ಪಾಸಿಟಿವಿಟಿ ದರ ಕೂಡ ಆತಂಕಕಾರಿ ಪ್ರಮಾಣದಲ್ಲಿ ಏರಿದ್ದು, ಶೇ.2.59ಕ್ಕೆ ನೆಗೆದಿದೆ.

Omicron Threat: ರಾಜ್ಯದಲ್ಲಿ ಒಂದೇ ದಿನ 149 ಮಂದಿಗೆ ಒಮಿಕ್ರೋನ್, ಕೊರೋನಾ ಸೋಂಕು ಹೆಚ್ಚಳ

ಮಂಗಳವಾದ ದಾಖಲಾದ ಪ್ರಕರಣಗಳು ಕಳೆದ ಆರು ತಿಂಗಳಲ್ಲೇ ಅಧಿಕ. ಇದು ಸ್ಪಷ್ಟವಾಗಿ ಕೋವಿಡ್‌ ಮೂರನೇ ಅಲೆಗೆ ಬಿರುಸಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ 15-20 ಸಾವಿರ ಕಡಿಮೆ ಪರೀಕ್ಷೆ ನಡೆದಿದ್ದರೂ 2,479 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

ಕೊರೋನಾ ನಿಯಂತ್ರಣಕ್ಕೆ 14 ಅಧಿಕಾರಿಗಳ 11 ತಂಡ ರಚಿಸಲಾಗಿದೆ. ರಾಜ್ಯ ಕೋವಿಡ್ ವಾರ್‌ ರೂಂಗೆ ಮುನೀಶ್ ಮೌದ್ಗಿಲ್ ನೇತೃತ್ವ, ವಿನೂತ್ ಪ್ರಿಯಾಗೆ ILI, Sari ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವ ಹೊಣೆ, ಶಾಲಿನಿ ರಜನೀಶ್‌ಗೆ ಸ್ಯಾಂಪಲ್ಸ್ ಕಲೆಕ್ಷನ್, ಟೆಸ್ಟಿಂಗ್ ಮೇಲುಸ್ತುವಾರಿ ವಹಿಸಲಾಗಿದೆ.