ಟಾರ್ಗೆಟ್-20 ದಕ್ಕಿಸಿಕೊಳ್ಳೋಕೆ ವಿಚಿತ್ರ ವ್ಯೂಹ! ಕರ್ನಾಟಕದಲ್ಲಿ ಕಮಾಲ್ ಮಾಡುತ್ತಾ ಕೈ ಪಡೆ?

ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿದೆ ಫ್ಯಾಮಿಲಿ ಪಾಲಿಟಿಕ್ಸ್ ರಣಘೋಷ ಶುರುವಾಗಿದೆ.. ಹೈಕಮಾಂಡ್ ವ್ಯೂಹಕ್ಕೆ ರಾಜ್ಯ ಕಾಂಗ್ರೆಸ್ ನಾಯಕರೇ ಪ್ರತಿವ್ಯೂಹ ಹೆಣೆದಿದ್ದಾರಂತೆ.

First Published Feb 25, 2024, 5:30 PM IST | Last Updated Feb 25, 2024, 5:30 PM IST

ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿದೆ ಫ್ಯಾಮಿಲಿ ಪಾಲಿಟಿಕ್ಸ್ ರಣಘೋಷ ಶುರುವಾಗಿದೆ.. ಹೈಕಮಾಂಡ್ ವ್ಯೂಹಕ್ಕೆ ರಾಜ್ಯ ಕಾಂಗ್ರೆಸ್ ನಾಯಕರೇ ಪ್ರತಿವ್ಯೂಹ ಹೆಣೆದಿದ್ದಾರಂತೆ. ಹಾಗಾದರೆ, ಏನಿದು ವಿಚಿತ್ರ ಕಹಾನಿ? ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದೇಕೆ ಹಸ್ತ ಸೇನಾನಿಗಳ ಆ ಸ್ಪೆಷಲ್ ಬೇಡಿಕೆ? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ಡಿಮ್ಯಾಂಡ್ ವರ್ಸಸ್ ಹೈಕಮಾಂಡ್!

ಕಾಂಗ್ರೆಸ್ ಒಳಗೆ ನಡೀತಿರೋ ಕಸರತ್ತಿನ ಅಸಲಿ ಕತೆ ಶುರುವಾಗೋದೇ ಇಲ್ಲಿಂದ ಮುಂದೆ.. ಯಾಕಂದ್ರೆ, ಹೈಕಮಾಂಡ್ ಲೆಕ್ಕಾಚಾರಕ್ಕೆ ಬದಲಾಗಿ ಮತ್ತೊಂದು ಲೆಕ್ಕಾಚಾರ ಹಾಕ್ಕೊಂಡು ಕೂತಿದ್ದಾರಂತೆ ರಾಜ್ಯದ ನಾಯಕರು. ಕಾಂಗ್ರೆಸ್ ಹೈಮಾಂಡ್ ನೋಡಿದ್ರೆ, ಸಚಿವರೇ ಲೋಕಸಭಾ ಚುನಾವಣೆಗೆ ನಿಲ್ಲಲಿ ಅಂತ ಅಪೇಕ್ಷೆ ಪಡ್ತಾ ಇದೆ.. ರಾಜ್ಯ ನಾಯಕರು ನೋಡಿದ್ರೆ, ನಮ್ಮ ಬದಲಿಗೆ ನಮ್ಮ ಕುಟುಂಬದವರಿಗೆ ಟಿಕೆಟ್ ಕೊಡಿ ಅಂತ ಕೇಳ್ತಾ ಇದಾರೆ.. ಹಾಗಾದ್ರೆ, ಈ ಇಬ್ಬರ ಲೆಕ್ಕಾಚಾರ ಏನು? 

ನಮಗೆ ಬೇಡ, ನಮ್ಮ ಪರಿವಾರದ ಯಾರಿಗೋ ಟಿಕೆಟ್ ಕೊಡಿ ಅಂತ ಶುರುವಾಗಿರೋ ಕಾಂಗ್ರೆಸ್ ನಾಯಕರ ಬೇಡಿಕೆಗೆ, ಮತ್ತೊಂದು ಟ್ವಿಸ್ಟ್ ಕೂಡ ಎದುರಾಗಿದೆ. ಅದರ ಪೂರ್ತಿ ಕತೆ ಇಲ್ಲಿದೆ ನೋಡಿ.. 

Video Top Stories