Asianet Suvarna News Asianet Suvarna News

ಸೈಲೆಂಟಾಗಿದ್ದ ಹೈಕಮಾಂಡ್‌ನನ್ನು ಬಡಿದೆಬ್ಬಿಸಿದ್ದು ಹೇಗೆ ಸಿಎಂ ಬಿಎಸ್‌ವೈ.?

Jun 12, 2021, 1:34 PM IST

ಬೆಂಗಳೂರು (ಜೂ. 12):  ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾತು ಜೋರಾಗಿ ಕೇಳಿ ಬಂದಿತ್ತು. ಈ ಸುದ್ದಿಗೆ ಬಿಎಸ್‌ವೈ ಪೂರ್ಣವಿರಾಮ ಇಟ್ಟಿದ್ದಾರೆ. 

ನಾಯಕತ್ವ ಬದಲಾವಣೆ ಪ್ರಸ್ತಾವನೆಗೆ ಬಿಗ್‌ಟ್ವಿಸ್ಟ್, ಹೈಕಮಾಂಡ್‌ನಿಂದ ಬಂತು ಖಡಕ್ ಸಂದೇಶ

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರೇ ‘ಯಡಿಯೂರಪ್ಪ ಅವರೇ ಇನ್ನೂ ಎರಡು ವರ್ಷ ಸಿಎಂ ಎಂದು ಹೇಳಿದ ನಂತರವೂ ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಆ ಚರ್ಚೆಯೇ ಅಪ್ರಸ್ತುತವಾಗಿದೆ. ಇನ್ನೂ ಎರಡು ವರ್ಷ ನಾನೇ ಸಿಎಂ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒತ್ತಿ ಹೇಳಿದ್ದಾರೆ.  ಇದೇ ವೇಳೆ, ಅರುಣ್‌ ಸಿಂಗ್‌ ಅವರ ಹೇಳಿಕೆಯಿಂದ ನನಗೆ ಆನೆ ಬಲ ಬಂದಂತಾಗಿದ್ದು, ಕೇಂದ್ರ ನಾಯಕರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನಷ್ಟುಉತ್ಸಾಹದಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದೂ ತಿಳಿಸಿದ್ದಾರೆ.