Karnataka Cabinet Reshuffle: ಮಂತ್ರಿಯಾಗೋ ಆಸೆ ಹೊರಹಾಕಿದ ಅರವಿಂದ ಬೆಲ್ಲದ್!

*ಸಂಪುಟದಲ್ಲಿ ಈ ಬಾರಿ ಸಿಗುತ್ತಾ ಅರವಿಂದ್‌ಗೆ 'ಬೆಲ್ಲ'
*ರಾಜ್ಯದಲ್ಲಿ ಸಂಪುಟ ವಿಸ್ತರಣೆ ಪುನಾರಚನೆ ಚರ್ಚೆ
*ಯಾವುದಕ್ಕೂ ತಲೆಕೆಡಿಸಕೊಳ್ಳಲ್ಲ : ಬೆಲ್ಲದ್‌
 

First Published Jan 25, 2022, 10:11 AM IST | Last Updated Jan 25, 2022, 10:11 AM IST

ಬೆಂಗಳೂರು (ಜ. 25): ಬಿಜೆಪಿ ವರಿಷ್ಠರು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ (UP Election) ಬಗ್ಗೆ ತಲೆಕೆಡಿಸಿಕೊಂಡಿದ್ದರೆ ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ (BJP) ಸಂಪುಟ ವಿಸ್ತರಣೆ (Cabinet Expansion) ಅಥವಾ ಪುನಾರಚನೆಯ ಚರ್ಚೆ ತೀವ್ರವಾಗತೊಡಗಿದೆ. ಈ ಮಧ್ಯೆ ಮಂತ್ರಿ ಆಗುವ ಆಸೆಯನ್ನ ಶಾಸಕ ಅರವಿಂದ್‌ ಬೆಲ್ಲದ್‌ (Aravind Bellad) ಹೊರಹಾಕಿದ್ದಾರೆ.‌ "ಮಂತ್ರಿಗಿರಿ ನೀಡುವ ಹೈಕಮಾಂಡ್‌, ಸಿಎಂಗೆ ಬಿಟ್ಟಿದ್ದು, ಮಂತ್ರಿಗಿರಿ ಕೋಡ್ತಾರೋ ಇಲ್ಲವೋ ಮಾಹಿತಿ ಇಲ್ಲ. ಸಚಿವ ಸ್ಥಾನ ಕೊಟ್ಟರೆ ಜನಮೆಚ್ಚುವ ಕೆಲಸ ಮಾಡುತ್ತೆನೆ" ಎಂದು ಬೆಲ್ಲದ್‌ ಹೇಳಿದ್ದಾರೆ.

ಇದನ್ನೂ ಓದಿ: Karnataka Cabinet Reshuffle: ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಚರ್ಚೆ ಬಿರುಸು

ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಂಪುಟ ಪುನಾರಚನೆಗಿಂತ ವಿಸ್ತರಣೆಯೇ ಸುರಕ್ಷಿತ ಎಂಬ ಭಾವನೆ ಬಂದಂತಿದೆ. ಪುನಾರಚನೆ ಸುಗಮವಾಗಿ ನಡೆದರೆ ಪರವಾಗಿಲ್ಲ. ಒಂದು ವೇಳೆ ಅದರಿಂದ ಅಸಮಾಧಾನ ತಲೆದೋರಿದರೆ ಅದನ್ನು ನಿಭಾಯಿಸುವುದರಲ್ಲೇ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಮೇಲಾಗಿ ಅದರ ನೇರ ಪರಿಣಾಮ ಮುಂದಿನ ಚುನಾವಣೆ ಮೇಲೆ ಬೀಳಬಹುದು ಎಂಬ ಆತಂಕವೂ ಅವರನ್ನು ಕಾಡುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

Video Top Stories