Karnataka Cabinet Reshuffle: ಸಂಪುಟ ಪುನಾರಚನೆ ಯಾವಾಗ.? ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ (Karnataka Cabinet Reshuffle) ಯಾವಾಗ ಎಂಬ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ. ಪಂಚರಾಜ್ಯ ಚುನಾವಣೆ ಬಳಿಕ ಕ್ಯಾಬಿನೆಟ್ ಸರ್ಕಸ್ ನಡೆಯಲಿದೆ. ಮಾರ್ಚ್ 2 ನೇ ವಾರದವರೆಗೂ ಸಂಪುಟ ಪುನಾರಚನೆ ಇಲ್ಲ. ಬಿಜೆಪಿ ಹೈಕಮಾಂಡ್
ಬೆಂಗಳೂರು (ಜ. 24): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ (Karnataka Cabinet Reshuffle) ಯಾವಾಗ ಎಂಬ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ. ಪಂಚರಾಜ್ಯ ಚುನಾವಣೆ ಬಳಿಕ ಕ್ಯಾಬಿನೆಟ್ ಸರ್ಕಸ್ ನಡೆಯಲಿದೆ. ಮಾರ್ಚ್ 2 ನೇ ವಾರದವರೆಗೂ ಸಂಪುಟ ಪುನಾರಚನೆ ಇಲ್ಲ. ಸಚಿವ ಸಂಪುಟ ಪುನಾರಚನೆ ಸಭೆಗಳನ್ನು ನಡೆಸಬೇಡಿ. ಬಜೆಟ್ ಅಧಿವೇಶನದ ಬಳಿಕ ಸಿಎಂ ನಿರ್ಧಾರ ಮಾಡುತ್ತಾರೆ' ಎಂದು ಸಚಿವರಿಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ.
ಸಂಪುಟ ಪುನಾರಚನೆ ಸಿಎಂಗಿರುವ ಪರಮಾಧಿಕಾರ. ಈ ಬಗ್ಗೆ ಗೊಂದಲ ಮೂಡಿಸಬೇಡಿ. ರೇಣುಕಾಚಾರ್ಯ, ಯತ್ನಾಳ್‌ಗೆ ಅನಗತ್ಯ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದೆ.