Asianet Suvarna News Asianet Suvarna News

ರಾಜ್ಯವೀಗ ಚುನಾವಣಾ ಚಿಲುಮೆ, ಪಕ್ಷಗಳ ಸ್ಟಾರ್‌ವಾರ್‌ಗೆ ವೇದಿಕೆಯಾದ ವೋಟರ್‌ ಗೋಲ್ಮಾಲ್‌!

ರಾಜ್ಯವೀಗ ಅಕ್ಷರಶಃ ಚುನಾವಣೆಯ ಚಿಲುಮೆಯಲ್ಲಿದೆ. ಮತದಾರರ ಮಾಹಿತಿ ಕಳವು ವಿಚಾರದಲ್ಲಿ ಚಿಲುಮೆ ಎನ್‌ಜಿಒ ಮೇಲೆ ಪೊಲೀಸರ ದಾಳಿ ನಡೆದ ಬೆನ್ನಲ್ಲಿಯೇ, ಸಾಕಷ್ಟು ಸೀಕ್ರೆಟ್‌ಗಳು ಬಹಿರಂಗವಾಗಿದೆ. ಅದರೊಂದಿಗೆ ರಾಜಕೀಯ ಪಕ್ಷಗಳ ಕೆಸರೆರಚಾಟ ಕೂಡ ಆರಂಭವಾಗಿದೆ.
 

ಬೆಂಗಳೂರು (ನ.19): ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ನೀಡಿರುವ ಮತದಾರರ ಮಾಹಿತಿ ಕಳವು ಆರೋಪ, ಈಗ ರಾಜಕೀಯ ನಾಯಕರ ಸ್ಟಾರ್‌ವಾರ್‌ಗೆ ಕಾರಣವಾಗಿದೆ. ವೋಟರ್‌ ಐಡಿ ವಿಚಾರದಲ್ಲಿ ಪೊಲೀಸರ ತನಿಖೆ ಕೂಡ ತೀವ್ರವಾಗಿದ್ದು, ತನಿಖೆ ನಡೆದಷ್ಟು ಅಕ್ರಮಗಳು ಇನ್ನಷ್ಟು ಬಹಿರಂಗವಾಗುತ್ತಿದೆ.

ಮಲ್ಲೇಶ್ವರಂ ಚಿಲುಮೆ ಕಚೇರಿಯ ಮೇಲೆ ಶುಕ್ರವಾರ ಪೊಲೀಸರ ದಾಳಿಯಾಗಿದೆ. ಪೊಲೀಸರ ದಾಳಿಯ ವೇಳೆ ಚಿಲುಮೆ ಸಂಸ್ಥೆಯ ಮಹತ್ವದ ಸೀಕ್ರೆಟ್‌ ಬಯಲಾಗಿದೆ. ಬಿಎಲ್ಒ ಎಂದು ಬಿಬಿಎಂಪಿ ನಿಂದ ನೀಡಿದ್ದ ಐಡಿ ಕಾರ್ಡ್‌ಗಳು ಪತ್ತೆಯಾಗಿದ್ದು. ಸುಮಾರು 50ಕ್ಕೂ ಅಧಿಕ ಕಾರ್ಡ್‌ ಇದ್ದವು ಎಂದು ಹೇಳಲಾಗಿದೆ.

Bengaluru: ಚಿಲುಮೆಗೆ ಅನುಮತಿ ನೀಡಿದ್ದು ಸರ್ಕಾರವಲ್ಲ: ಅನುಮೋದನೆ ಕೊಟ್ಟಿದ್ದು ಚುನಾವಣಾಧಿಕಾರಿ

ಪ್ರಭಾವಿ ಸಚಿವರಿಗೆ ಸೇರಿದ ಚೆಕ್‌ಗಳು ಕೂಡ ದಾಳಿ ವೇಳೆ ಪತ್ತೆಯಾಗಿದೆ. ಎರಡು ಸಾವಿರದಂತೆ ಹಣ ಬರೆದಿರುವ ಚೆಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಚಿವರ ಹೆಸರಿನ ಲೆಟರ್ ಹೆಡ್ ಮತ್ತು ಕವರ್. ಖ್ಯಾತ ಸಿನಿಮಾ ಸಂಸ್ಥೆಗೆ ಸೇರಿದ ಚೆಕ್ ಗಳು ಕೂಡ ಖಾಕಿ ಜಪ್ತಿ ಬೆಂಗಳೂರಿನ ಎಲ್ಲಾ ವಿಧಾನಸಭೆ ಕ್ಷೇತ್ರದ ಮತದಾರ ಡೇಟಾ ವಶಪಡಿಸಿಕೊಳ್ಳಲಾಗಿದೆ.