ಕನ್ನಡ ಪ್ರಭದಿಂದ ಹೊಸ ಪ್ರಯತ್ನ, 'ನಮ್ಮ ಬಳ್ಳಾರಿ' ವಿಶೇಷ ಪುರವಣಿ ಬಿಡುಗಡೆ

ಸದಾ ಒಂದಿಲ್ಲೊಂದು ವಿನೂತನ ಕಾರ್ಯಕ್ರಮ ಮಾಡುವ ಮೂಲಕ ಜನರನ್ನು ತಮ್ಮತ್ತ ಸೆಳೆಯುವ ಕನ್ನಡ ಪ್ರಭ (Kannada Prabha) ದಿನ ಪತ್ರಿಕೆ ಈ ಬಾರಿ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. 'ನಮ್ಮ ಬಳ್ಳಾರಿ' (Namma Ballari) ಎನ್ನುವ ವಿಶೇಷ ಪುರವಣಿಯನ್ನು ಹೊರ ತಂದಿದೆ. 

First Published May 21, 2022, 5:02 PM IST | Last Updated May 21, 2022, 5:03 PM IST

ಬೆಂಗಳೂರು (ಮೇ. 21): ಸದಾ ಒಂದಿಲ್ಲೊಂದು ವಿನೂತನ ಕಾರ್ಯಕ್ರಮ ಮಾಡುವ ಮೂಲಕ ಜನರನ್ನು ತಮ್ಮತ್ತ ಸೆಳೆಯುವ ಕನ್ನಡ ಪ್ರಭ (Kannada Prabha) ದಿನ ಪತ್ರಿಕೆ ಈ ಬಾರಿ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. 'ನಮ್ಮ ಬಳ್ಳಾರಿ' (Namma Ballari) ಎನ್ನುವ ವಿಶೇಷ ಪುರವಣಿಯನ್ನು ಹೊರ ತಂದಿದೆ. 

ನಮ್ಮ ಬಳ್ಳಾರಿ ಸಂಚಿಕೆ ಬಿಡುಗಡೆಗೊಳಿಸಿ ಏಷ್ಯಾನೆಟ್‌ ಸುವರ್ಣ ಸುದ್ದಿ ವಾಹಿನಿ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಪತ್ರಿಕೋದ್ಯಮದಲ್ಲಿ ಪತ್ರಿಕಾ ವಿತರಕರ ಪಾತ್ರ ಅತ್ಯಂತ ಮಹತ್ವದ್ದು. ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಶೇ. 90ರಷ್ಟುಸುಳ್ಳು ಸುದ್ದಿ ಹಂಚುತ್ತಿವೆ. ಆದರೆ, ಪತ್ರಿಕಾ ವಿತರಕರು ಸಮಾಜದ ಘನತೆ ಹಾಗೂ ಸೌಹಾರ್ದ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯನ್ನು ರಿಪಬ್ಲಿಕ ಆಫ್‌ ಬಳ್ಳಾರಿ ಎಂದು ಹಲವರು ಭಾವಿಸಿದ್ದರು. ಆದರೆ, ಕನ್ನಡಪ್ರಭ ಪತ್ರಿಕೆಯು ನಮ್ಮ ಬಳ್ಳಾರಿ ಎನ್ನುವ ಮೂಲಕ ನಮ್ಮೂರಿನ ಬಗ್ಗೆ ಜನರಲ್ಲಿ ಮತ್ತಷ್ಟುಹೆಮ್ಮೆ ಮೂಡಿಸಿದೆ. ಕನ್ನಡಪ್ರಭ ಹೊರತಂದಿರುವ ನಮ್ಮ ಬಳ್ಳಾರಿ ಸಂಚಿಕೆ ಗಮನಿಸಿ ತುಂಬ ಖುಷಿ ಆಯಿತು. ನನಗೂ ಗೊತ್ತಿರದ ಹಲವು ಮಾಹಿತಿ, ಇತಿಹಾಸ ಹಾಗೂ ಜಿಲ್ಲೆಯ ಸಮಗ್ರ ಮಾಹಿತಿ ಒಳಗೊಂಡಿದೆ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.