Asianet Suvarna News Asianet Suvarna News

ಕಂಪ್ಲಿ ಶಾಸಕ ಗಣೇಶ್‌ಗೆ ಜಾಮೀನು ಮಂಜೂರು

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲು ಪಾಲಾಗಿದ್ದ ಕಂಪ್ಲಿ ಕಾಂಗ್ರೆಸ್ ಶಾಸಕ ಜೆ.ಎನ್. ಗಣೇಶ್ ಅವರಿಗೆ ಜಾಮೀನು ದೊರೆತಿದೆ. ಗಣೇಶ್ ಕಳೆದ ಎರಡು ತಿಂಗಳುಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು.

Apr 24, 2019, 2:35 PM IST

ಬೆಂಗಳೂರು(ಏ.24): ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲು ಪಾಲಾಗಿದ್ದ ಕಂಪ್ಲಿ ಕಾಂಗ್ರೆಸ್ ಶಾಸಕ ಜೆ.ಎನ್. ಗಣೇಶ್ ಅವರಿಗೆ ಜಾಮೀನು ದೊರೆತಿದೆ. ಎರಡು ತಿಂಗಳುಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಗಣೇಶ್ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ಮಂಜರೂ ಮಾಡಿದೆ. ಲೋಕಸಭೆ ಚುನಾವಣೆಗೆ ನಿನ್ನೆ(ಏ.23) ಕರ್ನಾಟಕದಲ್ಲಿ ನಡೆದ ಎರಡನೇ ಮತ್ತು ಕೊನೆ ಹಂತದ ಮತದಾನ ಪ್ರಕ್ರಿಯೆಯಿಂದ ಗಣೇಶ್ ವಂಚಿತರಾಗಿದ್ದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..