Asianet Suvarna News Asianet Suvarna News

ಕಲಬುರಗಿ ಕೋಟೆಗಿಲ್ಲ ಕಾಯಕಲ್ಪ, ಕೋಟೆ ಬಿಡಲ್ಲ, ಮುಸ್ಲಿಂ ಕುಟುಂಬಗಳ ವಾದ..!

ಐತಿಹಾಸಿಕ ಕಲಬುರಗಿ ಕೋಟೆ ನೆನೆಗುದಿಗೆ ಬಿದ್ದಿದ್ದು ಕಾಯಕಲ್ಪ ದೊರೆಯುತ್ತಿಲ್ಲ. ಈ ಸ್ಥಳದ ಅಭಿವೃದ್ಧಿಗೆ ಸ್ಥಳೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಕೊಟೆಯೊಳಗೆ 282 ಮುಸ್ಲಿಂ ಕುಟುಂಬಗಳು ವಾಸವಾಗಿವೆ. ಅವರಿಗೆ ಮಾನವೀಯತೆಯ ಆಧಾರದ ಮೇಲೆ ಪುನರ್ವಸತಿ ಕಲ್ಪಿಸಿದರೂ, ಕೋಟೆ ಬಿಡಲು ಅವರು ಒಪ್ಪುತ್ತಿಲ್ಲ.

ಕಲಬುರಗಿ (ಜೂ. 01): ಐತಿಹಾಸಿಕ ಕಲಬುರಗಿ ಕೋಟೆ ನೆನೆಗುದಿಗೆ ಬಿದ್ದಿದ್ದು ಕಾಯಕಲ್ಪ ದೊರೆಯುತ್ತಿಲ್ಲ. ಈ ಸ್ಥಳದ ಅಭಿವೃದ್ಧಿಗೆ ಸ್ಥಳೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಕೊಟೆಯೊಳಗೆ 282 ಮುಸ್ಲಿಂ ಕುಟುಂಬಗಳು ವಾಸವಾಗಿವೆ. ಅವರಿಗೆ ಮಾನವೀಯತೆಯ ಆಧಾರದ ಮೇಲೆ ಪುನರ್ವಸತಿ ಕಲ್ಪಿಸಿದರೂ, ಕೋಟೆ ಬಿಡಲು ಅವರು ಒಪ್ಪುತ್ತಿಲ್ಲ. 'ನಿಜಾಮರ ಕಾಲದಲ್ಲಿ ಈ ಜಾಗವನನು ನಮಗೆ ವಾಸಿಸಲು ನೀಡಲಾಗಿದೆ. ನಿಜಾಮರು ನಮಗೆ ಇಲ್ಲಿ ಇರಲು ಅನುಮತಿ ಕೊಟ್ಟ ದಾಖಲೆಗಳಿವೆ. ಕೋರ್ಟ್ ತೀರ್ಪು ಬರುವವರೆಗೂ ನಾವು ಜಾಗ ಬಿಡಲ್ಲ' ಎಂದಿದ್ದಾರೆ. ಅವರನ್ನು ಹೊರ ಹಾಕದೇ ಅಭಿವೃದ್ಧಿ ಸಾಧ್ಯವಿಲ್ಲ. ವೋಟ್‌ ಬ್ಯಾಂಕ್‌ಗಾಗಿ ಜನನಾಯಕರು ಹಿಂದೇಟು ಹಾಕುತ್ತಿದ್ದಾರೆ.