Asianet Suvarna News Asianet Suvarna News

ಜ್ಯುಬಿಲಿಯೆಂಟ್, ಜಿಂದಾಲ್ ಈಗ ಜೆಕೆ ಟೈರ್ಸ್‌; 107 ಮಂದಿಗೆ ಕೊರೊನಾ ಸೋಂಕು

Jul 21, 2020, 6:15 PM IST

ಮೈಸೂರು (ಜು. 21): ಜ್ಯುಬಿಲಿಯೆಂಟ್ ಆಯ್ತು, ಜಿಂದಾಲ್ ಆಯ್ತು ಇದೀಗ ಜೆಕೆ ಟೈಯರ್ಸ್‌ ಕಾರ್ಖಾನೆಯ ಸರದಿ. ಇಲ್ಲಿನ 107 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೊನ್ನೆಯಷ್ಟೇ 55 ಕ್ಕೂ ಹೆಚ್ಚು ಕಾರ್ಮಿಕರಿಗೆ ಸೋಂಕು ಕಾಣಿಸಿಕೊಂಡಿತ್ತು. ಇಂದು 62 ಕ್ಕೂ ಹೆಚ್ಚು ಕಾರ್ಮಿಕರಿಗೆ ಸೋಂಕು ಕಾಣಿಸಿಕೊಂಡಿದೆ.

ಜೆಕೆ ಟೈರ್ಸ್‌ನ 3 ಘಟಕದ ಉದ್ಯೋಗಿಗಳಲ್ಲಿ ಆತಂಕ ಶುರುವಾಗಿದೆ. ಮೈಸೂರಿನ ಮೇಟಗಳ್ಳಿಯಲ್ಲಿ ಈ ಮೂರು ಘಟಕಗಳಿವೆ. ಮಧ್ಯ ವಯಸ್ಕರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದು ಉಳಿದ ಉದ್ಯೋಗಿಗಳು ಎಚ್ಚರಿಕೆಯಿಂದಿರಬೇಕಾಗಿದೆ. 

ಬೆಂಗಳೂರಿನಲ್ಲಿ ಈ 2 ವಾರ್ಡ್‌ಗಳು ಡೇಂಜರ್...ಡೇಂಜರ್..!

 

Video Top Stories