Asianet Suvarna News Asianet Suvarna News

'ನಿಖಿಲ್‌ಗೆ‌ ಶಾಸಕ ಯೋಗ, ಗಂಡು ಮಗು ಭಾಗ್ಯ, ಜೆಡಿಎಸ್‌ಗೆ ಅಧಿಕಾರ ಪಕ್ಕಾ.'!

- ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ- ವಿನಯ್ ಗುರೂಜಿ ಭೇಟಿ

- ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಕಾ ಎಂದು ವಿನಯ್ ಗುರೂಜಿ ಆಶೀರ್ವಚನ

- 'ನಿಖಿಲ್ ಕುಮಾರಸ್ವಾಮಿಗೆ ಶಾಸಕರಾಗುವ ಯೋಗವಿದೆ'

ಬೆಂಗಳೂರು (ಜು. 03): ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ವಿನಯ್ ಗುರೂಜಿಯವರನ್ನು ಭೇಟಿ ಮಾಡಿ, ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ವಿನಯ್ ಗುರೂಜಿ, ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಕಾ ಎಂದು ಆಶೀರ್ವಚನ ನೀಡಿದ್ದಾರೆ. 

ಶರವಣ ಮನೆಯಲ್ಲಿ HDK ಮತ್ತು ವಿನಯ್ ಗುರೂಜಿ ಭೇಟಿ

ಶರವಣ ತಾಯಿ ನಿಧನ ಹೊಂದಿದ್ದರಿಂದ, ವಿನಯ್ ಗುರೂಜಿಯವರು ಶರವಣ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಎಚ್‌ಡಿಕೆ ಕೂಡಾ ಶರವಣ ಮನೆಗೆ ಭೇಟಿ ನೀಡಿ, ಕೆಲ ಕಾಲ ಚರ್ಚೆ ನಡೆಸಿದ್ದಾರೆ.

Video Top Stories