Asianet Suvarna News Asianet Suvarna News

ಶೆಟ್ಟರ್ ಪೆದ್ದ ಪೆದ್ದನಂಗೆ ಮಾತನಾಡುವುದನ್ನು ನಿಲ್ಲಿಸಲಿ: ಸಿದ್ದರಾಮಯ್ಯ

Oct 16, 2021, 5:12 PM IST

ಬೆಂಗಳೂರು (ಅ. 16): ಉಗ್ರಪ್ಪ (Ugrappa) ಹಾಗೂ ಸಲೀಂ ಅವರ ಡಿಕೆಶಿ (DK Shivakumar) ಪರ್ಸೆಂಟೇಜ್ ಹೇಳಿಕೆಗೆ ಸಂಬಂಧಿಸಿದಂತೆ, ಡಿಕೆಶಿ-ಸಿದ್ದರಾಮಯ್ಯ ನಡುವೆ ಒಗ್ಗಟ್ಟಿಲ್ಲ ಎಂಬರ್ಥದಲ್ಲಿ ಜಗದೀಶ್ ಶೆಟ್ಟರ್ (Jagadesh Shettar) ಮಾತನಾಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

'ಟಿಪ್ಪು ಜಯಂತಿ ರಾಜಕೀಯಗೋಸ್ಕರ, ಮುಸ್ಲಿಂ ಸಮುದಾಯದವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ'

ವಿ ಎಸ್ ಉಗ್ರಪ್ಪ ನನ್ನ ಶಿಷ್ಯ ಅಲ್ಲ, ಅವರೊಬ್ಬ ಲೀಡರ್. ಅವರು ನನಗಿಂತ ಸೀನಿಯರ್. ಎಮರ್ಜೆನ್ಸಿ ಸಮಯದಲ್ಲಿ ಜೈಲಿಗೆ ಹೋಗಿದ್ದವರು. ಅವರೇಗ್ರಿ ಶಿಷ್ಯ ಆಗ್ತಾರೆ..? ಜಗದೀಶ್ ಶೆಟ್ಟರ್ ಪೆದ್ದ ಪೆದ್ದಂಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.