Asianet Suvarna News Asianet Suvarna News

ರಶ್ಮಿಕಾ ತಂದೆಯನ್ನು ಮನೆಯಿಂದ ಕರೆದೊಯ್ದ ಐಟಿ ಅಧಿಕಾರಿಗಳು!

ಮುಂದುವರಿದ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ; ರಶ್ಮಿಕಾ ತಂದೆಯನ್ನು ಮನೆಯಿಂದ ಹೊರ ಕರೆದೊಯ್ದ ಐಟಿ ಅಧಿಕಾರಿಗಳು; ವಿರಾಜಪೇಟೆ ನಿವಾಸದಲ್ಲಿ ಬೀಡು ಬಿಟ್ಟ ಐಟಿ ಅಧಿಕಾರಿಗಳು 

ವಿರಾಜಪೇಟೆ (ಜ.16): ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ  ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಚಿತ್ರದ ಶೂಟಿಂಗ್‌ಗಾಗಿ ರಶ್ಮಿಕಾ ಮನೆಯಿಂದ ಹೊರಗಡೆಯಿದ್ದು, ಅವರ ಅಪ್ಪ ಮನೆಯಲ್ಲಿದ್ದರು.

ಇದನ್ನೂ ನೋಡಿ: ರಶ್ಮಿಕಾ ನಿವಾಸದ ಮೇಲೆ ಐಟಿ ದಾಳಿ; ಹಿಂದಿದೆ ಈ ಸೀಕ್ರೆಟ್?...

ಶೋಧಕಾರ್ಯದ ನಡುವೆ ರಶ್ಮಿಕಾ ತಂದೆ ಮದನ್‌ ಮಂದಣ್ಣರನ್ನು ಅಧಿಕಾರಿಗಳು ಮನೆಯಿಂದ ಹೊರ ಕರೆದೊಯ್ದಿದ್ದಾರೆ.  ಆದರೆ ಎಲ್ಲಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿಲ್ಲ.