Asianet Suvarna News Asianet Suvarna News

ರೋಗಿಗಳು ಇನ್ಶೂರೆನ್ಸ್ ಕ್ಲೈಮ್ ಮಾಡಿದ್ರೆ ಕಳ್ಳಾಟವಾಡುತ್ತಿವೆ ಕಂಪನಿಗಳು, ಅವರದ್ದೇ ರೂಲ್ಸ್‌ ಅಂತೆ!

ಕೆಲ ಇನ್ಷೂರೆನ್ಸ್ ಕಂಪನಿಗಳು ಕೊರೊನಾಗೆ ತಮ್ಮದೇ ಆದ ರೂಲ್ಸ್ ಮಾಡಿಕೊಂಡಿವೆ. ಆಸ್ಪತ್ರೆಗೆ ದಾಖಲಾದ ಕೊರೊನಾ ರೋಗಿಗಳಿಗೆ ಹಣ ನೀಡದೇ ಚೆಲ್ಲಾಟವಾಡುತ್ತಿವೆ. ಕೇಂದ್ರದ ಆದೇಶಕ್ಕೂ ಕಿಮ್ಮತ್ತು ನೀಡುತ್ತಿಲ್ಲ.  

ಬೆಂಗಳೂರು (ಏ. 21): ಕೆಲ ಇನ್ಷೂರೆನ್ಸ್ ಕಂಪನಿಗಳು ಕೊರೊನಾಗೆ ತಮ್ಮದೇ ಆದ ರೂಲ್ಸ್ ಮಾಡಿಕೊಂಡಿವೆ. ಆಸ್ಪತ್ರೆಗೆ ದಾಖಲಾದ ಕೊರೊನಾ ರೋಗಿಗಳಿಗೆ ಹಣ ನೀಡದೇ ಚೆಲ್ಲಾಟವಾಡುತ್ತಿವೆ. ಕೇಂದ್ರದ ಆದೇಶಕ್ಕೂ ಕಿಮ್ಮತ್ತು ನೀಡುತ್ತಿಲ್ಲ.  ಕಡಿಮೆ ಪ್ರಮಾಣದ ಸೋಂಕು ಲಕ್ಷಣಗಳಿದ್ದರೆ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಆರೋಗ್ಯ ಸ್ಥಿತಿ ಗಂಭೀರವಿದ್ರೆ ಮಾತ್ರ ಹಣ ಬಿಡುಗಡೆ ಮಾಡುತ್ತಿವೆ. ಸ್ಟಾರ್ ಇನ್ಶೂರೆನ್ಸ್ ಕಂಪನಿ ಕಳ್ಳಾಟದಿಂದ ಸೋಂಕಿತರು ಪರದಾಡುವಂತಾಗಿದೆ. ಸೋಂಕಿತ ಯುವಕನೊಬ್ಬ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.