Asianet Suvarna News Asianet Suvarna News

ಭಾನುವಾರದಿಂದ ರಾಜ್ಯದಲ್ಲಿ ಕೊರೋನಾ ತಪಾಸಣೆ ಮತ್ತಷ್ಟು ಚುರುಕು..!

ಕೇಂದ್ರ ಸರ್ಕಾರ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್ ಮೂಲಕ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಅಗ್ಗದ ಬೆಲೆ ಖರೀದಿಸಿದೆ. ಈ ಕಿಟ್‌ಗಳನ್ನು ಬಳಸಿಕೊಂಡು ತ್ವರಿತವಾಗಿ ಕೋವಿಡ್ 19 ಸೋಂಕು ಪರೀಕ್ಷೆ ಮಾಡಬಹುದಾಗಿದೆ. 
 
ಬೆಂಗಳೂರು(ಏ.18): ಕೊರೋನಾ ವೈರಸ್ ತಪಾಸಣೆ ರಾಜ್ಯದಲ್ಲಿ ನಾಳೆ(ಏಪ್ರಿಲ್ 19)ಯಿಂದು ಮತ್ತಷ್ಟು ಚುರುಕಾಗಿ ಆರಂಭವಾಗಲಿದೆ. ಕೇಂದ್ರ ಸರ್ಕಾರ 12,400 ರ‍್ಯಾಪಿಡ್ ಕಿಟ್‌ಗಳನ್ನು ರಾಜ್ಯಕ್ಕೆ ನೀಡಿದೆ.

ಕೇಂದ್ರ ಸರ್ಕಾರ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್ ಮೂಲಕ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಅಗ್ಗದ ಬೆಲೆ ಖರೀದಿಸಿದೆ. ಈ ಕಿಟ್‌ಗಳನ್ನು ಬಳಸಿಕೊಂಡು ತ್ವರಿತವಾಗಿ ಕೋವಿಡ್ 19 ಸೋಂಕು ಪರೀಕ್ಷೆ ಮಾಡಬಹುದಾಗಿದೆ. 

ಚೀನಾ ನಿಗೂಢ ಯುದ್ಧಕ್ಕೆ ಮದ್ದೆರೆದ ಭಾರತ: ಡ್ರ್ಯಾಗನ್‌ ಹುಟ್ಟಡಗಿಸಲು ಪ್ಲಾನ್‌ ರೆಡಿ!

ಇಂದು ರಾಜ್ಯಕ್ಕೆ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳು ದೊರಕಲಿವೆ. ರ‍್ಯಾಪಿಡ್ ಕಿಟ್ ಮೂಲಕ ಕೇವಲ 20-30 ನಿಮಿಷದಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚಬಹುದಾಗಿದೆ. ಆರಂಭಿಕ ಹಂತದಲ್ಲಿ ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ಮಾತ್ರ ಈ ಕಿಟ್‌ಗಳನ್ನು ಬಳಸಲಾಗುತ್ತೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.