Asianet Suvarna News Asianet Suvarna News
breaking news image

ಹುಬ್ಬಳ್ಳಿ ಗಲಭೆಯ ಮಾಸ್ಟರ್‌ಮೈಂಡ್ ಮೌಲ್ವಿ ವಸೀಂ ಅರೆಸ್ಟ್

ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಮೌಲ್ವಿ ವಸೀಂ ಪಠಾಣ್ ರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಿಗ್ಗೆಯಷ್ಟೇ ಅಜ್ಞಾತಸ್ಥಳದಲ್ಲಿ ಕುಳಿತು ವಿಡಿಯೋ ಮಾಡಿದ್ದ ವಸೀಂ ಅವರನ್ನು ಬಂಧಿಸಲು ಪೊಲೀಸರು ಮೂರು ತಂಡಗಳನ್ನು ಮಾಡಿದ್ದರು. 
 

ಬೆಂಗಳೂರು (ಏ.19): ಹುಬ್ಬಳ್ಳಿಯಲ್ಲಿ (Hubballi) ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಮಾಸ್ಟರ್ ಮೈಂಡ್  (Mastermind) ಮೌಲ್ವಿ ವಸೀಂ ಪಠಾಣ್ ನನ್ನು (Wasim Pathan) ಹುಬ್ಬಳ್ಳಿ ಪೊಲೀಸರು (Hubballi Police) ಬಂಧಿಸಲು ಯಶಸ್ವಿಯಾಗಿದ್ದಾರೆ.  ಈತನ ಹುಡುಕಾಟಕ್ಕೆ ಮೂರು ತಂಡಗಳನ್ನು ಪೊಲೀಸರು ರಚಿಸಿದ್ದರು. ಹುಬ್ಬಳ್ಳಿಯಿಂದ ತಪ್ಪಿಸಿಕೊಂಡು ಹೈದರಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದ ಎನ್ನುವ ಮಾಹಿತಿಯ ಮೇರೆಗೆ ಈತನನ್ನು ಬಂಧಿಸಿ ಠಾಣೆಗೆ ಕರೆತರಲಾಗಿದೆ.

ಈ ಪ್ರಕರಣದಲ್ಲಿ ನನ್ನನ್ನು ಬೇರೆಯದೇ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಠಾಣೆಯ ಮುಂದೆ ಬಂದಿದ್ದ ಉದ್ರಿಕ್ತರನ್ನು ನಾನು ಸಮಾಧಾನಪಡಿಸುವ ಕೆಲಸವನ್ನು ಮಾಡುತ್ತಿದ್ದೆ ಎಂದು ಇಂದು ಬೆಳಗ್ಗೆ ಅಜ್ಞಾತಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದ ಮೌಲ್ವಿ ವಸೀಂ ಹೇಳಿದ್ದ. ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಉಗ್ರವಾದಿಯ ರೀತಿ ಬಿಂಬಿಸಲಾಗುತ್ತಿದೆ.  ಆದ್ರೆ ಗಲಭೆ ನಡೆದಾಗ ಉದ್ರಿಕ್ತರನ್ನು ಸಮಾಧಾನ ಮಾಡುತ್ತಿದ್ದೆ, ಯಾವುದೇ ಪ್ರಚೋದನಕಾರಿ ಭಾಷಣವನ್ನು ಮಾಡಿರಲಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದ.

ಹುಬ್ಬಳ್ಳಿ ಗಲಭೆ: ಪ್ರಚೋದನಕಾರಿ ಭಾಷಣ ಮಾಡಿದ್ದ ವಸೀಂಗಾಗಿ ಹೈದರಾಬಾದ್‌ಗೆ ತೆರಳಿದ ಪೊಲೀಸರು

ಘಟನೆ ನಡೆದು ನಾಲ್ಕು ದಿನಗಳಾಗಿದ್ದು, ಈವರೆಗೂ ವಸೀಂ ತಲೆಮರೆಸಿಕೊಂಡಿದ್ದರು. ಈತನ ಜೊತೆ ಗಲಭೆಯಲ್ಲಿ ಭಾಗಿಯಾಗಿದ್ದ 8 ಮಂದಿಯೂ ಪರಾರಿಯಾಗಿದ್ದೂ, ಅವರಿಗೂ ಶೋಧ ಕಾರ್ಯ ಮುಂದುವರಿದಿದೆ. ಆದರೆ, ಸದ್ಯದ ಮಾಹಿತಿಯ ಪ್ರಕಾರ ಮೌಲ್ವಿ ವಸೀಂ ಮಾತ್ರ ಪೊಲೀಸರ ಕೈಗೆ ಸಿಕ್ಕಿದ್ದಾನೆ.

Video Top Stories