Asianet Suvarna News Asianet Suvarna News

ಹುಬ್ಬಳ್ಳಿ ದೇಶದ್ರೋಹ ಪ್ರಕರಣ: ಕಾಶ್ಮೀರ ವಿದ್ಯಾರ್ಥಿಗಳು ಮರಳಿ ತವರಿಗೆ

ಕಾಶ್ಮೀರಿ ವಿದ್ಯಾರ್ಥಿಗಳಿಂದ ಪಾಕ್‌ಗೆ ಜೈಕಾರ ಪ್ರಕರಣ; ಹುಬ್ಬಳ್ಳಿಯ ಕೆ.ಎಲ್‌.ಇ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಪ್ರಕರಣ; ಆರೋಪಿಗಳ ಮೇಲೆ ಹಲ್ಲೆ ನಡೆದ ಹಿನ್ನೆಲೆ   

ಹುಬ್ಬಳ್ಳಿ (ಫೆ.19): ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನಕ್ಕೆ ಜೈಕಾರ ಹಾಕಿರುವ ಪ್ರಕರಣದ ಬೆನ್ನಲ್ಲೇ, ಇತರ ಕಾಶ್ಮೀರಿ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.

ಹುಬ್ಬಳ್ಳಿಯ ಕೆ.ಎಲ್‌.ಇ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪಾಕ್ ಪರ ಜೈಕಾರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದು,  ಕಳೆದ ಸೋಮವಾರ ಕೋರ್ಟ್‌ ಆವರಣದಲ್ಲಿ ಅವರ ಮೇಲೆ ಹಲ್ಲೆಯೂ ನಡೆದಿತ್ತು.     

ಇದನ್ನೂ ನೋಡಿ | ಹುಬ್ಬಳ್ಳಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೇಸ್; ಪ್ರಕರಣಕ್ಕೆ ಸಿಕ್ತು ಬಿಗ್‌ ಟ್ವಿಸ್ಟ್!

ಈಗ ಉಳಿದ ಕಾಶ್ಮೀರ ವಿದ್ಯಾರ್ಥಿಗಳು ಕೂಡಾ ಅತಂಕದಲ್ಲಿ ದಿನ ದೂಡುತ್ತಿದ್ದು, ಪೊಲೀಸರ ಸೂಚನೆ ಮೇರೆಗೆ ವಾಪಾಸು ಕಾಶ್ಮೀರಕ್ಕೆ ಮರಳಿದ್ದಾರೆ. 

ಇದನ್ನೂ ನೋಡಿ | ಪಾಕ್-ಪರ ಘೋಷಣೆ: ಬಿಜೆಪಿ ಸರ್ಕಾರ ವಿರುದ್ಧ ತಿರುಗಿಬಿದ್ದ ಹಿಂದೂ ಸಂಘಟನೆಗಳು!

"

Video Top Stories